ಭಾರತ, ಮಾರ್ಚ್ 5 -- ಪ್ರಶ್ನೆ: ನನ್ನ ಮಗ 9ನೇ ತರಗತಿಯ ವಿದ್ಯಾರ್ಥಿ. ಬೆಳಿಗ್ಗೆ ಓದಲು ಕುಳಿತರೆ ಸಾಕು ನಿದ್ರೆ ಮಾಡುತ್ತಾನೆ. ಶಾಲೆಯಲ್ಲೂ ಸಹ ತೂಕಡಿಸುತ್ತಾನೆ ಎಂದು ಟೀಚರ್ ದೂರುತ್ತಾರೆ. ರಾತ್ರಿ ಓದಲು ಬಯಸುತ್ತಾನೆ. ಹಾಗಾಗಿ ರಾತ್ರಿ ನಿದ್ರೆ ಬೇಗ ಮಾಡುವುದಿಲ್ಲ. ಪರೀಕ್ಷೆ ಸಮೀಪಿಸುತ್ತಿದೆ. ಪರೀಕ್ಷೆ ಆದ ಮೇಲೆ ನಿದ್ರೆಯೇ ಬರುವುದಿಲ್ಲ ಎನ್ನುತ್ತಾನೆ. ಯಾಕೆ ಹೀಗೆ ಆಗುತ್ತಿದೆ ತಿಳಿಯದು. ಏನು ಮಾಡಬೇಕು ಗೊತ್ತಾಗುತ್ತಿಲ್ಲ. ದಯವಿಟ್ಟು ತಿಳಿಸಿ.

ಉತ್ತರ: ನಿಮ್ಮ ಮಗನ ನಿದ್ರೆ ಸಲುವಾಗಿ ನಿಮಗೆ ಆತಂಕವಾಗಿದೆ. ಇದು ಸಹಜ ಮತ್ತು ಅನಿವಾರ್ಯ ಪ್ರತಿಕ್ರಿಯೆ. ಯಾಕೆಂದರೆ ಬೆಳೆಯುತ್ತಿರುವ ಮಕ್ಕಳಿಗೆ ಪೌಷ್ಟಿಕ ಆಹಾರದಷ್ಟೇ ನಿದ್ರೆಯೂ ಕೂಡ ಮಹತ್ವವಾದುದು. ಈ ಸಮಯದಲ್ಲಿ ಮಕ್ಕಳ ಮಿದುಳು ಇನ್ನು ಪೂರ್ಣವಾಗಿ ಬೆಳೆದಿರುವುದಿಲ್ಲ. ಸರಿ ಸುಮಾರು 25 ವರ್ಷದವರೆಗೆ ಮಿದುಳು ಬೆಳೆಯುತ್ತಿರುತ್ತದೆ. ಆದ್ದರಿಂದ ಬೆಳೆಯುವ ಹಂತಗಳಲ್ಲಿ ಮಕ್ಕಳ ಮಿದುಳಿಗೆ ವಿಶ್ರಾಂತಿಯ ಅಗತ್ಯ ಹೆಚ್ಚಿರುತ್ತದೆ. ಭಾವನೆಗಳ ನಿರ್ವಹಣೆಗೆ ಸಂಬಂಧಪಟ್ಟ ಕೆಲವು ಮಿದುಳ...