ಭಾರತ, ಫೆಬ್ರವರಿ 10 -- ಪದೇ ಪದೇ ಅನಾರೋಗ್ಯಕ್ಕೆ ತುತ್ತಾಗಲು ಪರಿಸರದ ಅಂಶಗಳು ಹಾಗೂ ಆಹಾರಗಳು ಮಾತ್ರ ಕಾರಣವಲ್ಲ. ತಜ್ಞರ ಪ್ರಕಾರ ನಾವು ಅನುಸರಿಸುವ ಈ ಸಣ್ಣ ಪುಟ್ಟ ತಪ್ಪುಗಳೂ ಕಾರಣವಾಗಬಹುದು. ಮನೆಯಲ್ಲಿ ನಮಗೆ ಅರಿವಿಲ್ಲದೇ ನಾವು ಮಾಡುವ ಈ ತಪ್ಪುಗಳು ಮಕ್ಕಳಿಂದ ಹಿಡಿದು ವಯಸ್ಸಾದವರೆಗೆ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ.

ವಿಶೇಷವಾಗಿ ಕಚೇರಿಯಿಂದ ಹೊರಡುವಾಗ ಅಥವಾ ಕೆಲಸಕ್ಕೆ ಹೊರಗೆ ಹೋದಾಗ, ನೀವು ಮಾಡುವ ಸಣ್ಣ ತಪ್ಪುಗಳು ನಿಮ್ಮ ಕುಟುಂಬ ಸದಸ್ಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಆಹಾರ ಪದ್ಧತಿ ಎಷ್ಟೇ ಉತ್ತಮವಾಗಿದ್ದರೂ, ನಿಮ್ಮ ತಪ್ಪುಗಳಿಂದ ನಿಮ್ಮ ಮನೆಗೆ ಪ್ರವೇಶಿಸಿದ ಕೆಟ್ಟ ಬ್ಯಾಕ್ಟೀರಿಯಾಗಳು ರೋಗಗಳು ಹರಡಲು ಕಾರಣವಾಗಬಹುದು. ಆ ಕಾರಣಕ್ಕೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದನ್ನು ಮರೆಯಬೇಡಿ. ನೀವು ಹಾಗೂ ನಿಮ್ಮ ಕುಟುಂಬ ಸದಸ್ಯರು ಈ ತಪ್ಪುಗಳನ್ನು ಮಾಡುತ್ತಿದ್ದರೆ ಈ ಅಭ್ಯಾಸಗಳ‌ನ್ನು ಇಂದೇ ಬದಲಿಸಿಕೊಳ್ಳಿ.

ಇಂದಿನ ಪೀಳಿಗೆ ಮಾಡುವ ದೊಡ್ಡ ತಪ್ಪು ಏನೆಂದರೆ, ಮನೆಯಿಂದ ಹೊರಗೆ ಇಡಲು ಜಾಗವಿಲ್ಲದ ...