Bengaluru, ಜನವರಿ 28 -- ಈ ಚಳಿಗಾಲದಲ್ಲಿ ಅನೇಕ ರೀತಿಯ ಹಣ್ಣುಗಳು ಲಭ್ಯವಿದೆ. ಅವುಗಳಲ್ಲಿ ಸ್ಟ್ರಾಬೆರಿ ಹಣ್ಣು ಕೂಡ ಒಂದು. ಇದು ರಸಭರಿತ ರುಚಿಕರವಾದ ಹಣ್ಣಾಗಿದ್ದು, ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫೋಲಿಕ್ ಆಮ್ಲ, ರಂಜಕ, ಪೊಟ್ಯಾಸಿಯಮ್, ಫೈಬರ್, ಉತ್ಕರ್ಷಣ ನಿರೋಧಕಗಳು, ಪಾಲಿಫಿನಾಲ್ ಸಂಯುಕ್ತ ಮುಂತಾದ ಪೋಷಕಾಂಶಗಳಿವೆ. ಮಕ್ಕಳಿಗೆ ಸ್ಟ್ರಾಬೆರಿ ಅಂದ್ರೆ ತುಂಬಾ ಇಷ್ಟಪಡುತ್ತಾರೆ. ಸಂಜೆ ಶಾಲೆಯಿಂದ ಬಂದ ಕೂಡಲೇ ಮಕ್ಕಳಿಗೆ ಸ್ಟ್ರಾಬೆರಿ ಜ್ಯೂಸ್ ಮಾಡಿಕೊಟ್ಟರೆ ಅವರು ತುಂಬಾ ಖುಷಿಯಿಂದ ಕುಡಿಯುತ್ತಾರೆ. ಸ್ಟಾಬೆರಿ ಜ್ಯೂಸ್ ತಯಾರಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಸ್ಟ್ರಾಬೆರಿ- 10, ಹಾಲು- ಅರ್ಧ ಲೀಟರ್, ಸಕ್ಕರೆ- 2 ಚಮಚ.

ತಯಾರಿಸುವ ವಿಧಾನ: ಮೊದಲಿಗೆ ಸ್ಟ್ರಾಬೆರಿ ಹಣ್ಣನ್ನು ನೀರಿನಲ್ಲಿ ಹಾಕಿ ಕಾಲು ಗಂಟೆ ಕಾಲ ಬಿಡಿ. ನಂತರ ಅವನ್ನು ತೊಳೆದು ಪಕ್ಕಕ್ಕೆ ಇರಿಸಿ. ಸ್ಟ್ರಾಬೆರಿ ಹಣ್ಣನ್ನು ಎರಡರಿಂದ ಮೂ...