Bengaluru, ಫೆಬ್ರವರಿ 11 -- ಮಕ್ಕಳು ಸಂಜೆ ಶಾಲೆಯಿಂದ ಬಂದ ಕೂಡಲೇ ತಿಂಡಿ ಬೇಕು ಎಂದು ಹಠ ಮಾಡಿದರೆ ಈ ತಿಂಡಿಯನ್ನು ಮಾಡಿ ಕೊಡಿ. ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇದು ತುಂಬಾ ಇಷ್ಟವಾಗುತ್ತದೆ. ಕುರುಕಲು ತಿಂಡಿ ಅಂದ್ರೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ. ಸಂಜೆ ಚಹಾ ಹೀರುತ್ತಾ ಗರಿಗರಿಯಾದ ತಿಂಡಿ ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಇನ್ಯಾಕೆ ತಡ, ಹಾಗಿದ್ದರೆ ತಯಾರಿಸಿ ಗರಿಗರಿ ಕೋಡುಬಳೆ. ಸುಮಾರು ಒಂದು ತಿಂಗಳವರೆಗೆ ಡಬ್ಬದಲ್ಲಿ ಎತ್ತಿಟ್ಟರೂ ಕೆಡುವುದಿಲ್ಲ. ಇದನ್ನು ತಯಾರಿಸುವುದು ಹೇಗೆ ಅನ್ನೋದು ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- 1 ಕಪ್, ಚಿರೋಟಿ ರವೆ- ಕಾಲು ಕಪ್, ಮೈದಾ ಹಿಟ್ಟು- 2 ಚಮಚ, ತೆಂಗಿನಕಾಯಿ ತುರಿ- 3 ಚಮಚ, ಹುರಿಗಡಲೆ ಪುಡಿ- 2 ಚಮಚ, ಜೀರಿಗೆ- 2 ಚಮಚ, ಎಳ್ಳು- 1 ಚಮಚ, ಬೆಳ್ಳುಳ್ಳಿ- 5, ಇಂಗು- ಚಿಟಿಕೆ, ಎಣ್ಣೆ- 5 ಚಮಚ, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು, ಅಚ್ಚಖಾರದ ಪುಡಿ- 4 ಚಮಚ, ಕರಿಬೇವು- 15 ಎಲೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲಿಗೆ ಮಸಾಲೆ ತಯಾರ...