ಭಾರತ, ಮಾರ್ಚ್ 9 -- ಬಹುತೇಕ ಮಂದಿ ಐಸ್ ಕ್ರೀಮ್ ಇಷ್ಟಪಡುತ್ತಾರೆ. ಆದರೆ ಅದನ್ನು ಹೆಚ್ಚಾಗಿ ಹೊರಗೆ ಖರೀದಿಸಿ ತಿನ್ನುತ್ತಾರೆ. ಆದರೆ, ಮನೆಯಲ್ಲೇ ಸರಳವಾಗಿ ಐಸ್ ಕ್ರೀಂ ತಯಾರಿಸಬಹುದು. ಬ್ರೆಡ್ ಐಸ್ ಕ್ರೀಮ್ ಅನ್ನು ನೀವು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಯಾವುದೇ ಕೃತಕ ಸಿಹಿ ಹಾಕದೆ ಆರೋಗ್ಯಕರವಾಗಿ ಇದನ್ನು ಮಾಡಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವೊಂದು ಐಸ್ ಕ್ರೀಮ್ ಕೃತಕ ಹಣ್ಣಿನ ಸಾರ ಅಥವಾ ಸಿಹಿಕಾರಕಗಳಿಂದ ತುಂಬಿರಬಹುದು. ಇದ್ಯಾವುದು ಹಾಕದೆ ಮನೆಯಲ್ಲೇ ತಯಾರಿಸುವ ಈ ಬ್ರೆಡ್ ಐಸ್ ಕ್ರೀಂ ಬಹಳ ರುಚಿಕರವಾಗಿರುತ್ತದೆ. ಬ್ರೆಡ್ ಐಸ್ ಕ್ರೀಂ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: 5 ಬ್ರೆಡ್ ಸ್ಲೈಸ್‌, 200 ಮಿಲಿ ಕಂಡೆನ್ಸ್ಡ್ ಮಿಲ್ಕ್, 1 ಹಿಡಿ ಬಾದಾಮಿ, 1 ಕತ್ತರಿಸಿದ ಬಾಳೆಹಣ್ಣು, 200 ಮಿಲಿ ಯೋಗರ್ಟ್ (ಮೊಸರು) , 2 ಚಮಚ ಅನಾನಸ್ ಜಾಮ್ , 1 ಕತ್ತರಿಸಿದ ಸೇಬು .

ಮಾಡುವ ವಿಧಾನ: ಬ್ರೆಡ್ ತೆಗೆದುಕೊಂಡು ಅದರ ಮೇಲೆ ಸ್ವಲ್ಪ ಜಾಮ್ ಹಚ್ಚಿ. ನಂತರ, ಅವನ್ನು ಒಂದ...