Bengaluru, ಫೆಬ್ರವರಿ 15 -- ಲಸಿಕೆಯು ನಿಮ್ಮ ಮಗುವನ್ನು ಗಂಭೀರ ಆರೋಗ್ಯ ಅಪಾಯಗಳಿಂದ ರಕ್ಷಿಸುವ ಸುಲಭ ಮತ್ತು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಶಿಶುಗಳು ಪ್ರತಿರಕ್ಷಣಾ ವ್ಯವಸ್ಥೆಗಳೊಂದಿಗೆ ಜನಿಸುತ್ತವೆಯಾದರೂ, ಇದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಹಲವಾರು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಶಿಶುಗಳು ಅತೀ ವೇಗವಾಗಿ ಅನಾರೋಗ್ಯ ಮತ್ತು ಮಾರಣಾಂತಿಕ ವೈರಸ್‌‌‌ಗಳಿಗೆ ತುತ್ತಾಗುತ್ತಾರೆ. ಈ ಅಪಾಯಗಳಿಂದ ಅವರನ್ನು ರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುವ ಔಷಧವೇ ಲಸಿಕೆಗಳು.

ಮದರ್‌‌‌ಹುಡ್ ಆಸ್ಪತ್ರೆಯ ಕನ್ಸಲ್ಟೆಂಟ್, ನಿಯೋನಾಟಾಲಜಿಸ್ಟ್ ಮತ್ತು ಮಕ್ಕಳ ತಜ್ಞರಾದ ಡಾ.ಶೆಲ್ಲಿ ಗುಪ್ತಾ ಹೇಳುವಂತೆ, ಲಸಿಕೆಗಳು ಮಗುವಿನ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವ ಮೂಲಕ ರಕ್ಷಣಾತ್ಮಕ ಕವಚವಾಗಿ ಕಾರ್ಯನಿರ್ವಹಿಸುತ್ತವೆ. ಅವು ರೋಗದ ನಿಷ್ಕ್ರಿಯ ಅಥವಾ ದುರ್ಬಲ ರೂಪಗಳನ್ನು ದೇಹಕ್ಕೆ ಪರಿಚಯಿಸುತ್ತವೆ, ನಿಜವಾದ ಅನಾರೋಗ್ಯಕ್ಕೆ ಕಾರಣವಾಗದೆ ಈ ಅಪಾಯಗಳನ್ನು ಪರಿಣಾಮಕಾರಿಯಾಗಿ ಗುರುತಿಸಲು ಮತ್ತು ಎದುರಿಸಲು ...