ಭಾರತ, ಜನವರಿ 31 -- ಬೇರುನಾಳ ಚಿಕಿತ್ಸೆ ಎಂದರೆ ಹಲ್ಲಿನ ಬೇರಿನ ಭಾಗದಲ್ಲಿರುವ ನರವನ್ನು ತೆಗೆದು ಆ ಭಾಗಕ್ಕೆ 'ಗಟ್ಟಾಪರ್ಚಾ' ಎಂಬ ನಿರ್ಜೀವ ವಸ್ತುವನ್ನು ತುಂಬಿಸಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಇದಕ್ಕೆ 'ರೂಟ್ ಕೆನಾಲ್ ಥೆರಪಿ' ಎನ್ನಲಾಗುತ್ತದೆ. ಆಡುಭಾಷೆಯಲ್ಲಿ ಚುಟುಕಾಗಿ RCT ಎನ್ನಲಾಗುತ್ತದೆ. ಸಾಮಾನ್ಯವಾಗಿ ಹಲ್ಲಿಗೆ ದಂತ ಕ್ಷಯವಾಗಿ ಅದು ಏನಾಮಲ್ ಪದರ ಮತ್ತು ಡೆಂಟಿನ್ ಪದರಗಳನ್ನು ದಾಟಿ ದಂತಮಜ್ಜೆಗೆ ತಲುಪಿದಾಗ ಅಸಾಧ್ಯವಾದ ನೋವು ಇರುತ್ತದೆ. ಒಮ್ಮೆ ದಂತ ಕ್ಷಯ ಹಲ್ಲಿನ ಮಧ್ಯಭಾಗದಲ್ಲಿರುವ ದಂತ ಮಜ್ಜೆ ಅಥವಾ ಡೆಂಟಲ್ ಪಲ್ಪ್ ಎಂಬ ಅಂಗಾಂಶಕ್ಕೆ ತಲುಪಿದ ಬಳಿಕ ಆ ಹಲ್ಲಿಗೆ ಸಾಂಪ್ರದಾಯಿಕವಾದ ಹಲ್ಲಿನ ಸಿಮೆಂಟ್, ಬೆಳ್ಳಿ, ಅಥವಾ ಇನ್ನಾವುದೋ ಬಿಳಿ ಬಣ್ಣದ ಸಿಮೆಂಟ್‍ಗಳನ್ನು ಹಾಕಲು ಸಾಧ್ಯವಿಲ್ಲ. ದಂತಕ್ಷಯ ದಂತಮಜ್ಜೆಗೆ ತಲುಪಿದ ಬಳಿಕ ದಂತಮಜ್ಜೆ ನಿಧಾನವಾಗಿ ಸಾಯುತ್ತದೆ. ಹಲ್ಲು ತನ್ನ ಬಿಳಿ ಬಣ್ಣವನ್ನು ಕಳೆದುಕೊಂಡು ತೆಲುಗುಲಾಬಿ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಈ ಹಂತದಲ್ಲಿ ಹಲ್ಲನ್ನು ಉಳಿಸಬೇಕಾದರೆ ಬೇರುನಾಳ ...