Bengaluru, ಜನವರಿ 31 -- ಚರ್ಮದ ಆರೈಕೆ ವಿಚಾರ ಬಂದಾಗ ನಮಗೆ ಹೆಚ್ಚಾಗಿ ತೊಂದರೆಯಾಗುವುದು ಸೂರ್ಯನ ಅತಿನೇರಳೆ ಕಿರಣಗಳಿಂದ. ಅದರಲ್ಲೂ ಸಣ್ಣ ಮಕ್ಕಳು ಮತ್ತು ಹದಿಹರೆಯದವರ ತ್ವಚೆಗೆ ಸೂರ್ಯನ ಕಿರಣಗಳು ನೇರವಾಗಿ ಸೋಕಿದರೆ ಅವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಜತೆಗೆ ಮಕ್ಕಳು ಆಟೋಟ, ಪಿಕ್‌ನಿಕ್, ಸ್ಕೂಲ್ ಡೇ ಎಂದು ಹೊರಗಡೆ ಬಿಸಿಲಿನಲ್ಲಿ ಇರುವಾಗ, ಅವರ ಎಳೆಚರ್ಮವನ್ನು ಸನ್‌ಸ್ಕ್ರೀನ್ ಬಳಸಿ ಕಾಪಾಡಬಹುದು. ಮಕ್ಕಳು ಸನ್‌ಸ್ಕ್ರೀನ್ ಬಳಸುವುದರಿಂದ ಅವರ ಕೋಮಲ ತ್ವಚೆ ಸೂರ್ಯನ ಬಿಸಿಲಿನಿಂದ ಕಪ್ಪಾಗುವುದನ್ನು ತಡೆಯುವುದಲ್ಲದೆ, ದೀರ್ಘಾವಧಿಯಲ್ಲಿ ಕಾಣಿಸಿಕೊಳ್ಳಬಹುದಾದ ಚರ್ಮದ ಕ್ಯಾನ್ಸರ್‌ನಿಂದ ಕಾಪಾಡುತ್ತದೆ. ಯಾಕೆಂದರೆ ಮಕ್ಕಳ ಚರ್ಮ ನೇರ ಸೂರ್ಯನ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ಅವರಲ್ಲಿ ಸಣ್ಣ ವಯಸ್ಸಿನಲ್ಲಿಯೇ ಚರ್ಮ ಗಡುಸಾಗಿ ವಯಸ್ಕರಂತೆ ಕಾಣಿಸುವ ಸಾಧ್ಯತೆಯಿರುತ್ತದೆ. ಹೀಗಾಗಿ ಅವರ ಚರ್ಮದ ಆರೈಕೆಯನ್ನು ಹೆತ್ತವರು ಮಾಡಬೇಕಿದೆ.

ಸನ್‌ಸ್ಕ್ರೀನ್ ಬಳಕೆಯಲ್ಲಿ ಎರಡು ವಿಧಗಳಿವೆ. ಮಿನರಲ್ ಮತ್ತು ಕೆಮಿಕಲ್ ಎಂದಿದ್ದು,...