Bengaluru, ಫೆಬ್ರವರಿ 3 -- ಬೀಟ್ರೂಟ್ ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಆದರೆ, ಮಕ್ಕಳು ಹಾಗೂ ಹೆಚ್ಚಿನ ವಯಸ್ಕರಿಗೆ ಇದು ರುಚಿಸುವುದಿಲ್ಲ. ಬೀಟ್ರೂಟ್‌ನಲ್ಲಿ ಕಬ್ಬಿಣ, ಜೀವಸತ್ವಗಳಂತಹ ವಿವಿಧ ಪೋಷಕಾಂಶಗಳು ಹೇರಳವಾಗಿದೆ. ಮನೆಯಲ್ಲಿ ಯಾರೂ ಬೀಟ್ರೂಟ್ ತಿನ್ನಲು ಇಷ್ಟಪಡದಿದ್ದರೆ ಓಟ್ಸ್ ಬೀಟ್ರೂಟ್ ದೋಸೆ ಮಾಡಿ ಕೊಡಿ. ಮಕ್ಕಳು ತುಂಬಾ ಇಷ್ಟಪಟ್ಟು ತಿಂತಾರೆ. ಬೆಳಗ್ಗಿನ ಉಪಾಹಾರವಾಗಿ ತಿನ್ನಬಹುದು ಅಥವಾ ರಾತ್ರಿ ಊಟವಾಗಿಯೂ ತಿನ್ನಬಹುದು. ಹಾಗೆಯೇ ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು. ಇದನ್ನು ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಓಟ್ಸ್- 1 ಕಪ್, ಬಾಂಬೆ ರವೆ- 1 ಕಪ್, ಬೀಟ್ರೂಟ್- 1, ಹಸಿ ಮೆಣಸಿನಕಾಯಿ- 2, ಶುಂಠಿ- 1 ಸಣ್ಣ ತುಂಡು, ಜೀರಿಗೆ- 1 ಚಮಚ, ನೀರು- ಅಗತ್ಯಕ್ಕೆ ತಕ್ಕಷ್ಟು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು.

ಇದನ್ನೂ ಓದಿ: ತ್ವರಿತವಾಗಿ ತಯಾರಾಗುವ ಆಲೂಗಡ್ಡೆ-ರವೆ ದೋಸೆ ಮಾಡಿ ನೋಡಿ; ರುಚಿಯಂತೂ ಸೂಪರ್, ಇಲ...