ಭಾರತ, ಮಾರ್ಚ್ 5 -- ಮಕರ ರಾಶಿಯ ಯುಗಾದಿ ವರ್ಷ ಭವಿಷ್ಯ: ನೀವು ಉತ್ತಾರಾಷಾಢ ನಕ್ಷತ್ರದ 2, 3 ಮತ್ತು 4ನೇ ಪಾದ, ಶ್ರವಣ ನಕ್ಷತ್ರದ 1, 2, 3 ಮತ್ತು 4ನೇ ಪಾದಗಳು, ಧನಿಷ್ಠ ನಕ್ಷತ್ರದ 1 ಮತ್ತು 2ನೇ ಪಾದದಲ್ಲಿ ಜನಿಸಿದ್ದಲ್ಲಿ ನಿಮ್ಮದು ಮಕರ ರಾಶಿ ಆಗುತ್ತದೆ. ನಿಮ್ಮ ಹೆಸರಿನ ಮೊದಲ ಅಕ್ಷರವು ಬೊ, ಜ ಅಥವಾ ಜಿ ಆಗಿದ್ದಲ್ಲಿ ಉತ್ತಾರಾಷಾಢ ನಕ್ಷತ್ರ, ಶಿ, ಶು, ಶೆ ಮತ್ತು ಶೊ ಆದಲ್ಲಿ ಶ್ರವಣ ನಕ್ಷತ್ರ ಹಾಗೂ ಗ ಅಥವಾ ಗಿ ಆಗಿದ್ದಲ್ಲಿ ಧನಿಷ್ಠ ನಕ್ಷತ್ರ ಹಾಗೂ ಮಕರ ರಾಶಿ ಆಗುತ್ತದೆ. ದ್ವಾದಶ ರಾಶಿಗಳ ರಾಶಿ ಚಕ್ರದಲ್ಲಿ ಮಕರ ರಾಶಿಯದ್ದು 10ನೇ ಸ್ಥಾನ. ಮೇಕೆ ಈ ರಾಶಿಯ ಚಿಹ್ನೆ. ಈ ರಾಶಿಗೆ ಸೇರಿದವರು ಸ್ವಭಾವತಃ ವಾಸ್ತವಕ್ಕೆ ಒತ್ತುಕೊಡುವ ಬುದ್ಧಿವಂತ ಮನಃಸ್ಥಿತಿಯವರು. ಜೀವನದಲ್ಲಿ ಮಹಾತ್ವಾಕಾಂಕ್ಷೆ ಹೊಂದಿರುತ್ತಾರೆ. ಸಂದರ್ಭಕ್ಕೆ ತಕ್ಕಂತೆ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಸಕಾಲಕ್ಕೆ ನಿಯಂತ್ರಣಕ್ಕೆ ತಂದುಕೊಳ್ಳದಿದ್ದರೆ, ಸರಿಯಾದ ಕ್ರಮದಲ್ಲಿ ನಿರ್ವಹಿಸದಿದ್ದರೆ ಕೋಪ ಮತ್ತು ಅತೃಪ್ತಿ ಇವರ ಬದುಕಿನಲ್ಲಿ ದೌರ್ಬಲ್ಯಗಳಂತ...