ಭಾರತ, ಮೇ 11 -- ಸ್ಮೃತಿ ಮಂಧಾನ ಅವರ ಅಮೋಘ ಶತಕ ಹಾಗೂ ಬೌಲರ್‌ಗಳ ಸಂಘಟಿತ ದಾಳಿಯ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು ತ್ರಿಕೋನ ಏಕದಿನ ಸರಣಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 97 ರನ್‌ಗಳಿಂದ ಮಣಿಸಿ ಪ್ರಶಸ್ತಿ ಗೆದ್ದಿದೆ. ದಕ್ಷಿಣ ಆಫ್ರಿಕಾ, ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಸರಣಿಯಲ್ಲಿ ಹರಿಣಗಳು ಆಗಲೇ ಹೊರಬಿದ್ದಾಗಿದೆ. ಆತಿಥೇಯ ಶ್ರೀಲಂಕಾ ಹಾಗೂ ಭಾರತ ತಂಡಗಳು ಫೈನಲ್‌ನಲ್ಲಿ ಸ್ಪರ್ಧಿಸಿದವು. ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 7 ವಿಕೆಟ್ ನಷ್ಟಕ್ಕೆ 342 ರನ್‌ಗಳ ಬೃಹತ್ ಗಳಿಸಿತು. ಗುರಿ ಬೆನ್ನಟ್ಟಿದ ಲಂಕಾ ವನಿತೆಯರ ಪರ ನಾಯಕಿ ಚಮರಿ ಅಥಪತ್ತು 66 ಎಸೆತಗಳಲ್ಲಿ 51 ರನ್ ಗಳಿಸಿದರು. ನೀಲಾಕ್ಷಿಕಾ ಸಿಲ್ವಾ 58 ಎಸೆತಗಳಲ್ಲಿ 48 ರನ್ ಗಳಿಸಿ ಆತಿಥೇಯರ ತಂಡದ ಪರ ಪ್ರಮುಖ ಕೊಡುಗೆ ನೀಡಿದರು. ಉಳಿದಂತೆ ಆಟಗಾರ್ತಿಯರಿಂದ ಅರ್ಹ ಕೊಡುಗೆ ಬರಲಿಲ್ಲ. ತಂಡವು 245 ರನ್‌ಗಳಿಗೆ ಆಲೌಟ್ ಆಯ್ತು.
ದಕ್ಷಿಣ ಆಫ್ರಿಕಾ ವಿರು...
Click here to read full article from source
To read the full article or to get the complete feed from this publication, please
Contact Us.