ಭಾರತ, ಮಾರ್ಚ್ 5 -- ಶ್ರೀರಾಘವೇಂದ್ರ ಸ್ವಾಮಿಗಳ 404ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 430ನೇ ವರ್ಧಂತಿ ಉತ್ಸವ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವೈಭವೋತ್ಸವ ಪ್ರಯುಕ್ತ ಮಂಗಳವಾರ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು.
ಗುರುಸಾರ್ವಭೌಮ ದಾಸಸಾಹಿತ್ಯ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ಭಜನಾ ಮಂಡಳಿಗಳ 2,000 ಸದಸ್ಯರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ನ್ಯಾಯಸುಧಾ ಪರೀಕ್ಷೆಯನ್ನು ಸುಬುಧೇಂದ್ರ ತೀರ್ಥರು ನಡೆಸಿಕೊಟ್ಟರು. ವ್ಯಾಸರಾಜ ಮಠದ ವಿದ್ಯಾ ವಿಜಯತೀರ್ಥರು ಉಪಸ್ಥಿತರಿದ್ದರು.
ನಂತರ ಬಳ್ಳಾರಿಯ ಸಂಸದ ಇ.ತುಕಾರಾಂ ಮತ್ತು ಬೆಂಗಳೂರಿನ ಪೂರ್ಣಪ್ರಜ್ಞಾ ವಿದ್ಯಾಪೀಠದ ಶ್ರೀ ವಿದ್ವಾನ್ ಯು.ಕೇಶವಾಚಾರ್ಯರನ್ನು ಸನ್ಮಾನಿಸಲಾಯಿತು.
ಇದೇ ದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆದಿದ್ದು, ಭರತನಾಟ್ಯ ಕಾರ್ಯಕ್ರಮವನ್ನು ನೆರೆದವರು ಕಣ್ತುಂಬಿಕೊಂಡರು.
ಮಂತ್ರಾಲಯದ ಆವರಣದಲ್ಲಿ ಸಹಸ್ರ, ಸಹಸ್ರ ಭಕ್ತರು ರಾಘವೇಂದ್ರ ಸ್ವಾ...
Click here to read full article from source
To read the full article or to get the complete feed from this publication, please
Contact Us.