Mandya, ಏಪ್ರಿಲ್ 19 -- ಮಂಡ್ಯ: ಮಂಡ್ಯ ಜಿಲ್ಲೆ ಕಾವೇರಿ ನದಿ ತೀರ, ಕೃಷ್ಣರಾಜಸಾಗರ ಜಲಾಶಯ ಹಾಗೂ ಹಿನ್ನೀರಿನ ಪ್ರಮುಖ ಪ್ರವಾಸಿ ತಾಣಗಳಿರುವ ಜಿಲ್ಲೆ. ಈಗಾಗಲೇ ಇಲ್ಲಿ ಹಲವು ಪ್ರವಾಸಿ ತಾಣಗಳು ಅಭಿವೃದ್ದಿಯಾಗಿವೆ. ಸದ್ಯ ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ರಂಗನತಿಟ್ಟು, ಮುತ್ತತ್ತಿ, ಶಿವನಸಮುದ್ರ, ಕೊಕ್ಕರೆ ಬೆಳ್ಳೂರು, ಹೊಸ ಹೊಳಲು ಸಹಿತ 106 ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇದಲ್ಲದೇ ಮಂಡ್ಯ ಜಿಲ್ಲೆಯಲ್ಲಿ 5 ಜಲ ಕ್ರೀಡೆಗೆ ಅನುಕೂಲಕರ ಜಾಗಗಳನ್ನು ಗುರುತಿಸಲಾಗಿದೆ. ಕೃಷ್ಣರಾಜಸಾಗರ ಹಿನ್ನೀರು, ಮುತ್ತತ್ತಿ. ಶ್ರೀರಂಗಪಟ್ಟಣ, ಬಲಮುರಿ, ಕೆರೆ ತೊಣ್ಣೂರಿನಲ್ಲಿ ಜಲ ಕ್ರೀಡೆಗೆ ಸೂಕ್ತ ವಾತಾವರಣವಿದ್ದು. ಇನ್ನಷ್ಟು ಅಭಿವೃದ್ದಿಪಡಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ರೂಪಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.

ಸರ್ಕಾರದ ಆದೇಶದಂತೆ ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಯಲ್ಲಿ ನೂತನ ಪ್ರವಾಸಿ ತಾಣಗಳನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ,...