ಭಾರತ, ಫೆಬ್ರವರಿ 3 -- ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಕಾರೊಂದು ವಿಸಿ ನಾಲೆಗೆ ಬಿದ್ದು, ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇನ್ನಿಬ್ಬರ ಪತ್ತೆಯಾಗಿಲ್ಲ. ಹೀಗಾಗಿ ಆ ಇಬ್ಬರೂ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ತಿಬ್ಬನಹಳ್ಳಿಯ ಗ್ರಾಮದ ಬಳಿ ವೇಗವಾಗಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದ್ದಿದೆ. ಈ ವೇಳೆ ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳೀಯರ ನೆರವಿನಿಂದ ಈಜಿ ದಡ ಸೇರಿ ಬದುಕುಳಿದಿದ್ದಾರೆ. ನಾಪತ್ತೆಯಾಗಿದ್ದ ಇಬ್ಬರಿಗಾಗಿ ಪತ್ತೆಗಾಗಿ ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಾರಿನಲ್ಲಿದ್ದ ನಾಲ್ವರು ಮಂಡ್ಯ ಜಿಲ್ಲೆಯವರೇ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಪಾಂಡವಪುರದಿಂದ ಮಂಡ್ಯದತ್ತ ಬರುವಾಗ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಕಾರು ನಾಲೆ ನೀರಿಗೆ ಬಿದ್ದ ಕೂಡಲೇ ಸ್ಥಳೀಯರು ಸ್ಥಳದಲ್ಲಿ ಸೇರಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ನಾಲೆ ಆಳವಾಗಿದ್ದು, ಸ್ಥಳೀಯರು ಆಗಮಿಸಿ ಕಾರನ್ನು ಮೇಲೆತ್ತಲು ಪ್ರಯತ್ನಿ...