ಭಾರತ, ಜೂನ್ 6 -- ಮಂಗಳೂರು ನಗರದ ಕುಲಶೇಖರ ನಿವಾಸಿಯಾದ ಕೇವಲ 8 ವರ್ಷದ ರುಶಭ್ ರಾವ್ ಅವರು ತಮ್ಮ ಅನನ್ಯ ಪ್ರತಿಭೆಯೊಂದಿಗೆ ರಾಷ್ಟ್ರೀಯ ಮಟ್ಟದ ವೇದಿಕೆಯಲ್ಲಿ ಪ್ರತಿನಿಧಿಸುತ್ತಾ , ಮೇ 25, 2025 ರಂದು ಗೋವಾದಲ್ಲಿ ಆಯೋಜಿಸಲಾದ "ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್ 2025" ಸ್ಪರ್ಧೆಯಲ್ಲಿ "ಪ್ರಿನ್ಸ್ ಆಫ್ ಜೂನಿಯರ್ ಮಾಡೆಲ್ ಇಂಟರ್‌ನ್ಯಾಷನಲ್" ಎಂಬ ಗೌರವಾನ್ವಿತ ಪ್ರಶಸ್ತಿಯನ್ನು ಗೆದ್ದು, ಮಂಗಳೂರಿಗೆ ಹಾಗೂ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.

ಲೂರ್ಡ್ಸ್ ಸೆಂಟ್ರಲ್ ಶಾಲೆ, ಬಿಜೈ , ಮಂಗಳೂರು ಇಲ್ಲಿನ ಮೂರನೇ ತರಗತಿಯ ವಿದ್ಯಾರ್ಥಿಯಾದ ರುಶಭ್, ತನ್ನ ಅಪ್ರತಿಮ ಪ್ರತಿಭೆ ಮತ್ತು ಆತ್ಮವಿಶ್ವಾಸದಿಂದ ವೇದಿಕೆಯಲ್ಲಿ ಕಂಗೊಳಿಸಿದ್ದಾನೆ. ಅವರು (KUWSDB) ಸಹಾಯಕ ಎಂಜಿನಿಯರ್ ಆಗಿರುವ ರಕ್ಷಿತ್ ರಾವ್ ಮತ್ತು ಅಶ್ವಿನಿ ದಂಪತಿಯ ಪುತ್ರ.

ಆರು ವರ್ಷದ ವಯಸ್ಸಿನಲ್ಲಿ ಮಾಡೆಲಿಂಗ್‌ಗೆ ಪ್ರವೇಶಿಸಿದ್ದ ರುಶಭ್, ಇತ್ತೀಚೆಗೆ ಉತ್ತಮ ನೃತ್ಯಕೌಶಲ್ಯ ಮತ್ತು ಅಭಿನಯದಿಂದ ಗುರುತಿಸಿಕೊಂಡಿದ್ದಾನೆ. ಅವರು ಈಗಾಗಲೇ ಮೂರು ತುಳು ಚಲನಚಿತ್ರಗಳು ...