ಭಾರತ, ಜನವರಿ 29 -- ಸಂಜೀರ ತಿಂಡಿಯ ಬಗ್ಗೆ ಕೇಳಿದ್ದೀರಾ. ನೋಡಲು ಪೂರಿಯಂತಿರುವ ಸಂಜೀರವು ಸಿಹಿ ರುಚಿಗೆ ಹೆಸರುವಾಸಿಯಾದ ಮಂಗಳೂರಿನ ಸಾಂಪ್ರದಾಯಿಕ ತಿಂಡಿ. ಈ ತಿಂಡಿಯನ್ನು ಸಾಮಾನ್ಯವಾಗಿ ಸಂಜೆಯ ಚಹಾಗೆ ತಯಾರಿಸಲಾಗುತ್ತದೆ. ಈ ರುಚಿಕರವಾದ ತಿಂಡಿಯನ್ನು ಮೈದಾ ಹಿಟ್ಟು, ರವೆ, ಸಕ್ಕರೆ ಮತ್ತು ಏಲಕ್ಕಿಯಂತಹ ಸರಳ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಪೂರಿಯನ್ನು ಕರಿಯುವಂತೆ ಇದನ್ನು ಕೂಡ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಸ್ವಲ್ಪ ಸಿಹಿ ಹಾಗೂ ಗರಿಗರಿಯಾದ ಸಂಜೀರಾ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಹಾಗಿದ್ದರೆ ರುಚಿಕರ ಹಾಗೂ ಗರಿಗರಿಯಾದ ಮಂಗಳೂರು ಶೈಲಿಯ ಸಂಜೀರ ತಯಾರಿಸುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳಿ.

ಬೇಕಾಗುವ ಸಾಮಗ್ರಿಗಳು: ಮೈದಾ- 2 ಕಪ್, ರವೆ- ಮುಕ್ಕಾಲು ಕಪ್, ನೀರು- ಅಗತ್ಯಕ್ಕೆ ತಕ್ಕಷ್ಟು, ಉಪ್ಪು, ಅರಶಿನ- ಚಿಟಿಕೆ, ಏಲಕ್ಕಿ ಪುಡಿ- ಅರ್ಧ ಚಮಚ, ತೆಂಗಿನತುರಿ- ಅರ್ಧ ಕಪ್, ಸಕ್ಕರೆ- 1 ಕಪ್, ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು....