ಭಾರತ, ಏಪ್ರಿಲ್ 13 -- Kalladka Flyover: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ ಅಡ್ಡಹೊಳೆ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ ಬಿ.ಸಿ.ರೋಡಿನಿಂದ ಮಾಣಿವರೆಗಿನ ಭಾಗದಲ್ಲಿ ಬಿ.ಸಿ.ರೋಡ್ ಸರ್ಕಲ್, ಸೇತುವೆಯ ಕೆಲಸಕಾರ್ಯಗಳು ಅಂತಿಮ ಹಂತದಲ್ಲಿವೆ. ಮಾಣಿಯಲ್ಲಿ ಹಲವು ಸಮಸ್ಯೆಗಳು ಇನ್ನೂ ಕ್ಲಿಯರ್ ಆಗಿಲ್ಲ. ಕಲ್ಲಡ್ಕ ಫ್ಲೈಓವರ್ ಕಾಮಗಾರಿಯ ಕೃಷ್ಣಕೋಡಿ ಪರಿಸರದ ಕೆಲಸಗಳು ಇನ್ನೂ ಮುಗಿದಿಲ್ಲ. ಆದರೆ ಒಂದು ತಿಂಗಳಿನೊಳಗೆ ಈ ಫ್ಲೈಓವರ್ ಕೆಲಸ ಮುಗಿದರೆ, 2.1 ಕಿ.ಮೀ ಉದ್ದದ ಹೊಸ ರಸ್ತೆಯೊಂದು ಸಿದ್ಧವಾದಂತಾಗುತ್ತದೆ.

ಬಹುನಿರೀಕ್ಷಿತ 2.1 ಕಿ.ಮೀ ಉದ್ದದ ಕಲ್ಲಡ್ಕ ಫ್ಲೈಓವರ್ ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದೆ. ಮೇ ಎರಡನೇ ವಾರದಲ್ಲಿ ಇದು ವಾಹನ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಇದೆ. ಕೃಷ್ಣಕೋಡಿ ಪರಿಸರದಲ್ಲಿ ಅಂತಿಮ ಹಂತದ ಕೆಲಸ ಕಾರ್ಯಗಳು ನಡೆಯುತ್ತಿವೆ. ಕಲ್ಲಡ್ಕ ಪೇಟೆಯಲ್ಲಿ ಇಕ್ಕೆಲಗಳಲ್ಲೂ ಸರ್ವೀಸ್ ರಸ್ತೆ ಕಾಂಕ್ರೀಟ್ ಆಗಿದೆ. ಕಲ್ಲಡ್ಕ ಫ್ಲೈಓವರ್ ನಲ್ಲಿ ಒಂದು ಪಾರ್ಶ್ವದಲ್ಲಿ ವಾಹನ ಸಂಚಾರಕ್ಕೆ ಅನುವುಮಾಡಿಕೊಡುವ ...