Mangalore, ಏಪ್ರಿಲ್ 3 -- ಮಂಗಳೂರು: ಮಂಗಳೂರು ನಗರ ವ್ಯಾಪ್ತಿಯ ಬಜಪೆ ಪೊಲೀಸ್ ಠಾಣಾ ಸರಹದ್ದಿನ ಪೆರ್ಮುದೆ ಪೇಟೆಯ ಮನೆಯೊಂದರಲ್ಲಿ ಸೋಮವಾರ ಮಧ್ಯರಾತ್ರಿ ಬಳಿಕ ನಡೆದಿರುವ ಕಳವು ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತಂಡಗಳ ತನಿಖೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗುರುವಾರವೂ ಪೊಲೀಸರು ಮನೆಯ ಸುತ್ತಲೂ ಬೀಡುಬಿಟ್ಟಿದ್ದು, ಪ್ರತಿಯೊಂದು ಅಂಶವನ್ನೂ ಬಿಡದೆ ತನಿಖೆ ನಡೆಸುತ್ತಿದ್ದಾರೆ. ಮನೆಯೊಳಗಿದ್ದ ಲಾಕರ್ ಒಡೆದು ಸುಮಾರು 80 ಲಕ್ಷ ರೂ. ಮೌಲ್ಯದ ಅಂದಾಜು 1ಕೆ.ಜಿಯಷ್ಟು ಚಿನ್ನಾಭರಣಗಳನ್ನು ಲೂಟಿಗೈದಿರುವ ಬಗ್ಗೆ ಪೊಲೀಸ್ ಮೂಲಗಳು ಈಗಾಗಲೇ ಧೃಡಪಡಿಸಿವೆ. ಪ್ರಕರಣದ ಸಮಗ್ರ ಮಾಹಿತಿ ಹಾಗೂ ಆರೋಪಿಗಳ ಪತ್ತೆಗಾಗಿ ಮನೆಯ ಪರಿಸರದಲ್ಲಿ ಶೋಧಕಾರ್ಯ ನಡೆಸಲಾಗಿದ್ದು ಮನೆಗೆ‌‌‌ ಸಂಬಂಧಿಸಿದ ವ್ಯಕ್ರಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಕ್ರೈಮ್ ಬ್ರಾಂಚ್ ಮತ್ತು ಟ್ರಾಫಿಕ್ ಎರಡೂ ಹೊಣೆಗಾರಿಕೆ ಹೊಂದಿರುವ ಡಿಸಿಪಿ ರವಿಶಂಕರ್, ಸಿಸಿಬಿ ಎಸಿಪಿ ಮನೋಜ್ ನಾಯಕ್, ಪಣಂಬೂರು ಎಸಿಪಿ ಕೆ.ಶ್ರೀಕಾಂತ್, ಬಜಪೆ ಇನ್ಸ್ ಪೆ...