Bengaluru, ಏಪ್ರಿಲ್ 21 -- ಸ್ಯಾಂಡಲ್‌ವುಡ್‌ ನಟ ರಿಷಿ ನಾಯಕನಾಗಿ ಗಮನ ಸೆಳೆದಿದ್ದಾರೆ. ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಇದೀಗ ಇದೇ ನಟನ ಮುಂದಿನ ಸಿನಿಮಾದ ಶೀರ್ಷಿಕೆ ಪೋಸ್ಟರ್‌ ರಿವೀಲ್‌ ಆಗಿದೆ. ಚಿತ್ರಕ್ಕೆ ʻಮಂಗಳಾಪುರಂʼ ಎಂಬ ಟೈಟಲ್‌ ಇಡಲಾಗಿದ್ದು, ಮಂಗಳೂರು ಮೂಲದ ಚಿತ್ರತಂಡ ಈ ಸಿನಿಮಾ ನಿರ್ಮಾಣಕ್ಕೆ ಇಳಿದಿದೆ. ಈ ಹಿಂದೆ ತುಳು ಚಿತ್ರರಂಗದಲ್ಲಿ ʻಉಮಿಲ್ʼ ಹಾಗೂ ʻದೊಂಬರಾಟʼ ಸಿನಿಮಾ‌ ಮಾಡಿ ಸಕ್ಸಸ್ ಕಂಡಿರುವ ರಂಜಿತ್ ರಾಜ್ ಸುವರ್ಣ, ರಿಷಿ ನಟನೆಯ ಹೊಸ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ರಿಷಿ ಅಭಿನಯಿಸುತ್ತಿರೋ ಹೊಸ ಚಿತ್ರಕ್ಕೆ ಮಂಗಳಾಪುರಂ ಎಂದು‌ ಹೆಸರಿಟ್ಟಿದ್ದು ಸದ್ಯ ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಬಿಡುಗಡೆ ಆಗಿದೆ. ರಿಷಿ ಜೊತೆಯಲ್ಲಿ ಕಾಶಿನಾಥ್ ಪುತ್ರ ಅಭಿಮನ್ಯು‌ ಕಾಶಿನಾಥ್ ನಟಿಸುತ್ತಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಅಭಿಮನ್ಯು‌‌ ಹಾಗೂ ರಿಷಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್‌ ನಟಿ ದಿಶ...