ಭಾರತ, ಏಪ್ರಿಲ್ 17 -- ಮಂಗಳೂರು: ಉಳ್ಳಾಲ ಸಮೀಪ ಕೋಟೆಕಾರು ಎಂಬಲ್ಲಿ ಯುವತಿಯೊಬ್ಳಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಂಗಳೂರು ಸಿಟಿ ಪೊಲೀಸ್ ಕಮೀಷನರ್ ಅನುಪಮ್ ಅಗರವಾಲ್ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಹೆಚ್ಚುವರಿ ತಂಡಗಳನ್ನು ಮಾಡಿ ತನಿಖೆ ನಡೆಸಲಾಗುತ್ತಿದ್ದು, ಗರಿಷ್ಠ ಮಟ್ಟಿನ ಪ್ರಾಧಾನ್ಯತೆ ನೀಡಿ ಸಂತ್ರಸ್ತೆಗೆ ನ್ಯಾಯ ದೊರಕಿಸಲು ಕೆಲಸ ಮಾಡುತ್ತಿರುವುದಾಗಿ ಅನುಪಮ್ ಅಗರ್ ವಾಲ್ ತಿಳಿಸಿದ್ದಾರೆ.

ಮಂಗಳೂರು ಮೂಲ್ಕಿಯ ಕಾರ್ನಾಡು ನಿವಾಸಿ ಆಟೊ ಚಾಲಕನಾಗಿರುವ ಪ್ರಭುರಾಜ್ (38), ಮಂಗಳೂರು ಕೋಟೆಕಾರು ಕುಂಪಲ ನಿವಾಸಿ ಪೈಂಟರ್, ಡ್ರೈವರ್ ಹಾಗೂ ಎಲೆಕ್ಟ್ರಿಶಿಯನ್ ಕೆಲಸ ಮಾಡುವ ಮಿಥುನ್ (37) ಮತ್ತು ಮಂಗಳೂರು ಪಡೀಲ್ ಕೊಡಕ್ಕಲ್ ನಿವಾಸಿ ಡೆಲಿವರಿ ಏಜಂಟ್ ಆಗಿ ಕೆಲಸ ಮಾಡುತ್ತಿರುವ ಮನೀಷ್ (30) ಎಂಬ ಮೂವರನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರ...