ಭಾರತ, ಫೆಬ್ರವರಿ 17 -- Mahindra BE6 Test Drive: ಮಹೀಂದ್ರಾದ ಹೊಸ ವಿದ್ಯುಚ್ಚಾಲಿತ ವಾಹನ BE 6, X EV 9 ಮಾರುಕಟ್ಟೆಗೆ ಬರುವ ಮೊದಲೇ ದೊಡ್ಡ ಕ್ರೇಝ್ ಸೃಷ್ಟಿಸಿದೆ. AI ಆಧಾರಿತ 80ಕ್ಕೂ ಅಧಿಕ ಫೀಚರ್ ಗಳು, ಸ್ಪರ್ಧಾತ್ಮಕ ದರ, ಭಾರತದಲ್ಲೇ ಡಿಸೈನ್ ಆಗಿರುವ ಮೇಕ್ ಇನ್ ಇಂಡಿಯಾ ಫೀಲಿಂಗ್.

ಮಹೀಂದ್ರಾ ವಾಹನಗಳ ಕಟ್ಟಾಭಿಮಾನಿ ಮಂಗಳೂರಿನ ದಂತವೈದ್ಯ ಡಾ. ಮುರಲೀ ಮೋಹನ ಚೂಂತಾರು ಈ ವಾಹನವನ್ನು ಈಗಾಗಲೇ ಬುಕ್ ಮಾಡಿದ್ದು, ಟೆಸ್ಟ್ ಡ್ರೈವ್ ಹೋಗಿಬಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ನಾನು ಆನಂದ ಮಹೀಂದ್ರಾ ಅವರ ಕಟ್ಟಾಭಿಮಾನಿ. ಅವರು ಮಹೀಂದ್ರಾ ವಾಹನಗಳನ್ನು ವಿನ್ಯಾಸಗೊಳಿಸುವ ವಿಧಾನ ಹಾಗೂ ಜನರ ಹಾಗೂ ಗ್ರಾಹಕರ ಅಪೇಕ್ಷೆ ಹಾಗೂ ಸೂಚನೆಗಳನ್ನು ಸ್ವೀಕರಿಸುವ ಮೂಲಕ ಹೊಸ ವಾಹನಗಳನ್ನು ಹಾಗೂ ಪ್ರಾಡಕ್ಟ್ ಗಳನ್ನು ಹೊರತರುವ ವೈಖರಿಗೆ ನಾನು ಫಿದಾ ಆಗಿದ್ದೇನೆ ಎಂದು ಡಾ. ಮುರಲೀ ಮೋಹನ ಚೂಂತಾರು ಹೇಳಿಕೊಂಡಿದ್ದಾರೆ.

ಕಳೆದ 20 ವರ್ಷಗಳಿಂದ ನಾನು ಮಹೀಂದ್ರಾ ವಾಹನಗಳನ್ನೇ ಉಪಯೋಗಿಸುತ್ತಿದ್ದು, ಸರಿಸುಮಾರು 5 ಲಕ್ಷ ಕಿಲೋಮೀ...