ಭಾರತ, ಮೇ 1 -- ಮಂಗಳೂರು ಹತ್ಯೆ: ಗುಂಪು ಹತ್ಯೆ ಕಾರಣ ಉದ್ವಿಗ್ನ ಸ್ಥಿತಿಯಲ್ಲಿದ್ದ ಮಂಗಳೂರಲ್ಲಿ ಇಂದು (ಮೇ 1) ಮತ್ತೆ ಇನ್ನೊಂದು ಗುಂಪು ಹತ್ಯೆ ನಡೆದಿದೆ. ಹಿಂದೂ ಕಾರ್ಯಕರ್ತ, ರೌಡಿ ಶೀಟರ್ ಸುಹಾಸ್ ಶೆಟ್ಟಿಯನ್ನು ನಡು ರಸ್ತೆಯಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮಂಗಳೂರು ಬಜ್ಪೆ ಕಿನ್ನಿಪದವು ಸಮೀಪ ಇಂದು ಈ ದಾಳಿ ನಡೆಯಿತು. ಬಜ್ಪೆ ಪೊಲೀಸರು ಸುಹಾಸ್ ಶೆಟ್ಟಿಯನ್ನು ಆಸ್ಪತ್ರೆಗೆ ಸಾಗಿಸಿ, ಕೇಸ್ ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿದರು.

ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಬಳಿಕ 2022ರ ಜುಲೈ 28 ರಂದು ಸುರತ್ಕಲ್‌ನಲ್ಲಿ ಕಾಟಿಪಳ್ಳ ಮಂಗಳಪೇಟೆಯ ಮಹಮ್ಮದ್ ಫಾಜಿಲ್ ಎಂಬಾತ ಕೊಲೆ ನಡೆದಿತ್ತು. ಈ ಕೇಸ್‌ನಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತನಾಗಿದ್ದ. ಈತನ ವಿರುದ್ಧ ಹಲವು ಕೊಲೆ ಯತ್ನದ ಪ್ರಕರಣಗಳು ಬೇರೆ ಬೇರೆ ಠಾಣೆಗಳಲ್ಲಿ ದಾಖಲಾಗಿವೆ.

ಪ್ರವೀಣ್ ನೆಟ್ಟಾರು ಹತ್ಯೆ ನಡೆದ ಬಳಿಕ ಅದಕ್ಕೆ ಪ್ರತೀಕಾರವಾಗಿ ಫಾಜಿಲ್ ಕೊಲೆಗೆ ನ...