ಭಾರತ, ಫೆಬ್ರವರಿ 24 -- ಮಂಗಳೂರು: ಎಷ್ಟೋ ಅಪಘಾತಗಳಲ್ಲಿ ಅಮಾಯಕರು ಸಾವನ್ನಪ್ಪುವ ಕುರಿತ ವರದಿ ನೋಡಿರುತ್ತೇವೆ. ಸಾಮಾನ್ಯವಾಗಿ ಆಕ್ಸಿಡೆಂಟ್‌ಗಳಿಗೆ ವೇಗದ ಪ್ರಯಾಣ, ಮಾಡುವ ತಪ್ಪುಗಳೇ ಕಾರಣ ಎಂದು ಹೇಳಿದರೂ, ಕೆಲವೊಮ್ಮೆ ಏನೂ ತಪ್ಪಿಲ್ಲದ ಅಮಾಯಕರು ಪ್ರಾಣ ಕಳೆದುಕೊಳ್ಳುವುದು ಖೇದಕರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂತಹದೇ ಘಟನೆಯೊಂದು ನಡೆದಿದ್ದು, ತನ್ನ ಮಗನ ಅಂಗಡಿ ಹೊರಗೆ ತನ್ನ ಪಾಡಿಗೆ ಕುಳಿತುಕೊಂಡಿದ್ದ ವೃದ್ದೆಯೊಬ್ಬರು ಅಪಘಾತದಿಂದ ಸಾವನ್ನಪ್ಪಿದ್ದಾರೆ. ಅಂಗಡಿ ಮುಂದೆ ಕುಳಿತಲ್ಲಿಗೆ ಕಾರೊಂದು ವೇಗವಾಗಿ ನುಗ್ಗಿ ಬಂದು ಡಿಕ್ಕಿಯಾಗಿದೆ. ಹೀಗಾಗಿ ತೀವ್ರವಾಗಿ ಗಾಯಗೊಂಡ ವೃದ್ಧೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಘಟನೆಯು ಪಾಲೆದಮರ ಎಂಬಲ್ಲಿ ಫೆ.23ರಂದು ನಡೆದಿದ್ದು, ವಾಮದಪದವು ನಿವಾಸಿಯಾದ ವೃದ್ಧೆ 91 ವರ್ಷದ ಸುಮತಿ ಎಂಬವರು ಮೃತಪಟ್ಟಿದ್ದಾರೆ. ಸುಮತಿ ಅವರು, ಮಗ ಮಂಜುನಾಥ್ ಅವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆ.23ರಂದು ಸುಮಾರು 6.45ರ ಸಮಯದಲ್ಲಿ ಬಂಟ್ವ...