Bengaluru, ಮಾರ್ಚ್ 12 -- ಮಂಗಳೂರು: ಕಳೆದ ಫೆಬ್ರವರಿ 25ರಂದು ನಿಗೂಢವಾಗಿ ನಾಪತ್ತೆಯಾಗಿ ಇಡೀ ರಾಜ್ಯದ ಗಮನ ಸೆಳೆದಿದ್ದ ಫರಂಗಿಪೇಟೆಯ ಕಿದೆಬೆಟ್ಟು ನಿವಾಸಿ ಬಾಲಕ ದಿಗಂತ್ ಸದ್ಯ ಬಾಲ ಕಲ್ಯಾಣ ಸಮಿತಿಯ ನಿರ್ದೇಶನದನ್ವಯ ಬಾಲಕರ ವಸತಿನಿಲಯದಲ್ಲಿದ್ದಾನೆ. ಈತ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ಕಾರಣ ಅದಕ್ಕೆ ಸಂಬಂಧಿಸಿದಂತೆ 12ರಂದು ಹೈಕೋರ್ಟ್ ನಲ್ಲಿ ಪೊಲೀಸರು ವಿವರ ಸಲ್ಲಿಸಬೇಕಿದ್ದು, ಅದಾದ ಬಳಿಕ ಕೋರ್ಟ್ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.

ಕಳೆದ ಶನಿವಾರ ದಿಗಂತ್ ಉಡುಪಿಯ ಡೀ ಮಾರ್ಟ್ ಮಳಿಗೆಯಲ್ಲಿ ಕಂಡುಬಂದಿದ್ದು, ಕೂಡಲೇ ಆತನ ಮನೆಯವರಿಗೆ ಮಾಹಿತಿ ನೀಡಿ, ಬಳಿಕ ಪೊಲೀಸರು ಆತನನ್ನು ಕರೆದುಕೊಂಡು ಬಂದಿದ್ದರು. ಬಳಿಕ ಆತ ಎಲ್ಲಿಗೆ ಹೋಗಿದ್ದ, ಏನೇನು ಮಾಡಿದ್ದ ಎಂಬಿತ್ಯಾದಿ ವಿವರಗಳನ್ನು ಪೊಲೀಸರು ಕಲೆಹಾಕಿದ್ದು, ಮರುದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ವಿವರಗಳನ್ನು ನೀಡಿದ್ದರು.

ಫರಂಗಿಪೇಟೆಯಿಂದ ಫೆ...