ಭಾರತ, ಮಾರ್ಚ್ 15 -- ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೆಲವು ಮನೆಗಳು, ಅಪಾರ್ಟ್‍ಮೆಂಟ್‍ಗಳು, ವ್ಯಾಪಾರಸ್ಥರು, ಕೈಗಾರಿಕೆಗಳು ಒಳಚರಂಡಿ ಜಾಲಕ್ಕೆ/ಮಷಿನ್ ಹೋಲ್‍ಗಳಿಗೆ ಮಳೆ ನೀರನ್ನು ಹರಿಯ ಬಿಡುತ್ತಿರುವುದು ಕಂಡು ಬಂದಿದೆ. ಇದರಿಂದಾಗಿ ಒಳಚರಂಡಿ ಜಾಲದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಳೆ ನೀರು ಮಿಶ್ರಿತ ಒಳಚರಂಡಿ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಮಷಿನ್ ಹೋಲ್‍ಗಳಿಂದ ಒಳ ಚರಂಡಿ ನೀರು ಹೊರ ಸೂಸಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಳೆ ನೀರು ಪೈಪ್‍ಗಳನ್ನು, ಕಟ್ಟಡದ ಚಾವಣಿಯ ಮಳೆ ನೀರಿನ ಹರಿವು ಅಥವಾ ಯಾವುದೇ ರೀತಿಯ ಮಳೆ ನೀರನ್ನು ಒಳಚರಂಡಿ ಜಾಲಕ್ಕೆ ಮತ್ತು ಮಷಿನ್ ಹೋಲ್‍ಗಳಿಗೆ ಸಂಪರ್ಕಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಅನಧಿಕೃತವಾಗಿ ಒಳಚರಂಡಿ ಜಾಲಕ್ಕೆ ಅಥವಾ ಮಷಿನ್ ಹೋಲ್‍ಗಳಿಗೆ ನೀಡಿರುವ ಕಟ್ಟಡದ ಮಳೆ ನೀರು ಸಂಪರ್ಕವನ್ನು ಕಡ್ಡಾಯವಾಗಿ ತೆರವುಗೊಳಿಸಲು ಸೂಚಿಸಲಾಗಿದೆ.

ಪಾಲಿಕೆಯ ಅಧಿಕಾರಿ ಅಥವಾ ಸಿಬ್ಬಂದಿಯಿಂದ ಅನಧಿಕೃತ ಜೋಡಣೆಗಳ ಬಗ್ಗ...