ಭಾರತ, ಮಾರ್ಚ್ 14 -- ಮಂಗಳೂರು: ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಾಚರಣೆಯಲ್ಲಿ ಅಕ್ರಮ ಪಿಸ್ತೂಲ್ ಹಾಗೂ ಗಾಂಜಾ ಮಾರಾಟ ಜಾಲವನ್ನು ಪತ್ತೆಹಚ್ಚಿ ಕೇರಳ ಮೂಲದ ಐವರು ನಟೋರಿಯಸ್ ಕ್ರಿಮಿನಲ್‌ಗಳನ್ನು ಬಂಧಿಸಿ, ಮೂರು ಪಿಸ್ತೂಲ್‌ಗಳು, ಆರು ಸಜೀವ ಮದ್ದುಗುಂಡುಗಳು ಮತ್ತು 12.895ಕೆಜಿ ಗಾಂಜಾ, ಮೂರು ಕಾರುಗಳು ಸೇರಿದಂತೆ ಹಲವಾರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಕಾಸರಗೋಡು ಜಿಲ್ಲೆಯ ಬೀಮನಡಿ ಗ್ರಾಮದ ಕುನ್ನುಂಕೈ ವೆಸ್ಟ್ ನಿವಾಸಿ ನೌಫಲ್(38), ಪೈವಳಿಕೆ ಗ್ರಾಮದ ಕುರ್ಡಪದವು ಪೋಸ್ಟ್, ಸುಂಕದಕಟ್ಟೆ ನಿವಾಸಿ ಮನ್ಸೂರ್(36), ಬಂದ್ಯೋಡ್, ಶಿರಿಯಾ ಪೋಸ್ಟ್, ಮಂಗಲ್ಪಾಡಿ ಪಂಚಾಯತ್ ಬಳಿಯ ನಿವಾಸಿ ಅಬ್ದುಲ್ ಲತೀಫ್(29), ಕಾಸರಗೋಡು ಜಿಲ್ಲೆಯ ಕಡಂಬಾರ್, ಮೊರ್ತಾನ ನಿವಾಸಿಗಳಾದ ಮೊಹಮ್ಮದ್ ಅಸ್ಕರ್(27), ಮೊಹಮ್ಮದ್ ಸಾಲಿ (31) ಬಂಧಿತ ನಟೋರಿಯಸ್ ಕ್ರಿಮಿನಲ್‌ಗಳು.

ಮಾ.12ರಂದು ಮಂಗಳೂರಿನ ನಾಟೆಕಲ್‌ನಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ನೌಫಲ್ ಹಾಗೂ ಮನ್ಸೂರ್‌ನನ್ನು ಮಂಗಳೂರು ಸಿಸಿಬಿ ಪೊಲೀಸರು...