ಭಾರತ, ಮೇ 16 -- ಮಂಗಳೂರು: ಮಂಗಳೂರಿಗೆ ತೆರಳುವ ಹಾಗೂ ಮಂಗಳೂರಿನಿಂದ ವಿವಿಧೆಡೆಗೆ ಹೋಗುವ ಹತ್ತು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರಿಸಲಾಗಿರುವುದಾಗಿ ರೈಲ್ವೆ ಪ್ರಕಟಣೆ ತಿಳಿಸಿದೆ. ಬೇಸಗೆ ರಜೆ ಹಿನ್ನೆಲೆಯಲ್ಲಿ ಕರಾವಳಿ ಕಡೆಗೆ ಬರುವ ಹಾಗೂ ಅಲ್ಲಿಂದ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.

1) ತಿರುವನಂತಪುರಂ ಸೆಂಟ್ರಲ್ ನಿಂದ ಮಂಗಳೂರಿಗೆ ತೆರಳುವ ಮಾವೇಲಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 1604ಕ್ಕೆ ಮೇ 17 ಮತ್ತು 19ರಂದು, ಮಂಗಳೂರು ಸೆಂಟ್ರಲ್ ನಿಂದ ತಿರುವನಂತಪುರಂ ಸೆಂಟ್ರಲ್ ಗೆ ತೆರಳುವ ಮಾವೇಲಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16603 ಮೇ 16 ಮತ್ತು 18ರಂದು ಹೆಚ್ಚುವರಿ ಎರಡು ಸ್ಲೀಪರ್ ಕ್ಲಾಸ್ ಬೋಗಿಗಳನ್ನು ಸೇರಿಸಲಾಗುತ್ತಿದೆ.

2) ತಿರುವನಂತಪುರಂ ಸೆಂಟ್ರಲ್ ನಿಂದ ಮಂಗಳೂರು ಸೆಂಟ್ರಲ್ ಗೆ ತೆರಳುವ ಮಲಬಾರ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 16629ಕ್ಕೆ ಮೇ 16ರಿಂದ 19ರವರೆಗೆ ಮಂಗಳೂರು ಸೆಂಟ್ರಲ್ ನಿಂದ ತಿರುವನಂದಪುರಂ ಸೆಂಟ್ರಲ್ ಮಲಬಾರ್ ಎಕ್ಸ್ ಪ್ರೆಸ್ ನ...