ಭಾರತ, ಮಾರ್ಚ್ 14 -- ಮಂಗಳೂರು: ಭಾರಿ ಸೆಖೆ, ಉಷ್ಣಾಂಶದಲ್ಲಿ ಏರಿಕೆಯ ಬಿಸಿ ಮೀನುಗಳಿಗೂ ತಟ್ಟಿದೆ. ಮೀನುಗಳು ಆಳಸಮುದ್ರದಿಂದಲೂ ಮೇಲೇಳಲು ಹಿಂದೇಟು ಹಾಕುತ್ತಿವೆ. ನೀರಿನಡಿ ತಂಪಾದ ಜಾಗದಲ್ಲಿ ಅವಿತುಕೊಳ್ಳುವ ಮೀನುಗಳು ಹೊರಗೆ ಬಂದಾಗಲಷ್ಟೇ ಬಲೆಗೆ ಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸಮುದ್ರದ ಮೀನುಗಳು ಈಗ ಮಂಗಳೂರಲ್ಲಿ ತುಟ್ಟಿಯಾಗಿವೆ.

ಆದಾಗ್ಯೂ ಬೆಂಗಳೂರಿಗೆ ಹೋಲಿಸಿದರೆ, ಮಂಗಳೂರಿನ ದರದಲ್ಲಿ ಸುಮಾರು 20ರಿಂದ 30 ರೂಪಾಯಿ ವ್ಯತ್ಯಾಸವಿದೆ. ಕಳೆದ ತಿಂಗಳಿಗೆ ಹೋಲಿಸಿದರೆ, ಈ ತಿಂಗಳು ಮಂಗಳೂರು ಮಾರುಕಟ್ಟೆಯಲ್ಲಿ ಮೀನಿನ ದರದಲ್ಲಿ ಸುಮಾರು 20ರೂಗಳಷ್ಟು ಅಂದಾಜು ಏರಿಕೆ ಕಂಡಿದೆ ಎಂದು ಮಾರಾಟಗಾರರು ತಿಳಿಸಿದ್ದಾರೆ. ಆದರೆ ವಾತಾವರಣ ಬದಲಾಗಿ ಮೀನುಗಳು ಎಂದಿನಂತೆ ದೊರಕಿದರೆ, ಇಳಿಯಬಹುದು ಎಂದು ಅವರು ವಿಶ್ಲೇಷಿಸಿದ್ದಾರೆ.

ಮಂಗಳೂರಿನ ಪ್ರಸಿದ್ಧ ಅಂಜಲ್ ಮೀನಿಗೆ ಕೆ.ಜಿಗೆ 700ರಿಂದ 750 ರೂ ಇದೆ. ದೊಡ್ಡ ಬಂಗುಡೆಗೆ 250 ರೂ ಇದೆ. ವೈಟ್ ಪಂಪ್ಲೆಟ್ ಮೀನಿಗೆ 1500 ರೂವರೆಗೂ ಕೆ.ಜಿ.ಗೆ ಇದೆ. ಬ್ಲಾಕ್ ಪಂಪ್ಲೆಟ್ ಗೆ ಕೆ.ಜಿ.ಗೆ 60...