ಭಾರತ, ಫೆಬ್ರವರಿ 12 -- ಮಂಗಳೂರು: ನಗರದ ಅಡ್ಯಾರ್ ಬಳಿ ಅಪಘಾತಕ್ಕೀಡಾಕಿದ್ದ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಿಸುತ್ತಿದ್ದ ವಾಹನದೊಳಗೆ ಸಿಲುಕ್ಕಿದ್ದ ಡ್ರೈವರ್ ಕಾಲನ್ನು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರು ಸೇಫ್ ಮಾಡಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಇಂದು (ಫೆ 12) ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಡ್ಯಾರ್ ಕಣ್ಣೂರಿನಲ್ಲಿ ನಂದಿನಿ ಡೈರಿ ಉತ್ಪನ್ನಗಳನ್ನು ಸಾಗಾಟದ ವಾಹನವು ಡಿವೈಡರ್ ಹಾರಿ ಇತ್ತ ಕಡೆ ಸಂಚರಿಸುತ್ತಿದ್ದು ಲಾರಿಗೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಡ್ರೈವರ್ ಕಾಲು ಅದರಡಿ ಸಿಲುಕಿಕೊಂಡಿತ್ತು‌. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಇದೇ ಮಾರ್ಗವಾಗಿ ಬಂಟ್ವಾಳದತ್ತ ವಾಹನದಲ್ಲಿ ಸಂಚರಿಸುತ್ತಿದ್ದವರು ತಕ್ಷಣ ಕಾರು ನಿಲ್ಲಿಸಿ ಅಪಘಾತ ನಡೆದಲ್ಲಿಗೆ ಧಾವಿಸಿದ್ದಾರೆ.

ರಸ್ತೆ ಅಪಘಾತ ಕಂಡು ಸ್ಥಳಕ್ಕೆ ಬಂದ ವಿಧಾನ ಸಭೆ ಸ್ಪೀಕರ್‌ ಯುಟಿ ಖಾದರ್, ಒಮ್ಮೆ ಎಲ್ಲವನ್ನೂ ಅವಲೋಕಿಸಿದರು. ಅಪಘಾತಕ್ಕೀಡಾದ ಕೆಎಂಎಫ್ ನಂದಿನಿ ಟ್ರಕ್‌ ಡ್ರೈವರ್ ಕಾಲು ನ...