Mangaluru, ಫೆಬ್ರವರಿ 28 -- ಮಂಗಳೂರು: ಬಜಪೆ ಗ್ರಾಮದ ಅದೈವ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನಕ್ಕೆ ತೆರಳಿ ನಿತ್ಯ ಆರಾಧನೆಗೆ ಮುಂದಿನ ದಿನಗಳಿಂದ ಅವಕಾಶವನ್ನು ನಿರಾಕರಿಸುವ ಮೂಲಕ ಮಂಗಳೂರು ಎಸ್‌ಇಝೆಡ್ ಕಂಪನಿಯು ತುಳುನಾಡಿನ ಆಸ್ಮಿತೆ, ನಂಬಿಕೆಯ ಮೇಲೆ ಸವಾರಿ ಮಾಡಲು ಹೊರಟಿದೆ ಎಂದು ದೂರಲಾಗಿದೆ.

ಕಾಂತಾರ ಸಿನಿಮಾದಲ್ಲೊಂದು ದೃಶ್ಯವಿದೆ. ಕೋಲದ ಸಂದರ್ಭದಲ್ಲಿ ಪಟಾಕಿ ಸಿಡಿಸಿದ ಕಾರಣಕ್ಕೆ ಆಕ್ರೋಶಗೊಂಡ ಆರಣ್ಯಾಧಿಕಾರಿಯೊಬ್ಬ ಸ್ಥಳೀಯರ ಜೊತೆ ತಗಾದೆ ತೆಗೆಯುತ್ತಾ‌ನೆ.. ಕೊನೆಗೆ ಮಾತಿಗೆ ಮಾತು ಬೆಳೆದು ಆ ಅರಣ್ಯಾಧಿಕಾರಿ 'ನಿಮ್ಮ ಆಚರಣೆ ಆಡಂಬರಗಳನ್ನೆಲ್ಲ ಬಂದ್ ಮಾಡಿಸ್ತೀನಿ' ಎನ್ನುತ್ತಾನೆ ಆ ಹೊತ್ತಿಗೆ ಚಿತ್ರದ ನಾಯಕ 'ನೀನ್ ಅಪ್ಪನಿಗೆ ಹುಟ್ಟಿದವನಾದ್ರೆ ಬಂದ್ ಮಾಡಿಸಾ?' ಅನ್ನೋ ಸಂಭಾಷಣೆ ಭಾರೀ ಜನಪ್ರಿಯತೆ ಪಡೆದಿತ್ತು. ಆದರೆ, ಅದೆಲ್ಲಾ ಸಿನಿಮಾಕ್ಕೆ ಮಾತ್ರ, ಆಚರಣೆಯನ್ನು ಬಂದ್ ಮಾಡಿಸ್ತೇ‌ನೆ ಎಂದು ಮಂಗಳೂರು ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಹೊರಟಿದ್ದಾರೆ.

ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ಸ...