ಭಾರತ, ಫೆಬ್ರವರಿ 25 -- ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ವಿರುದ್ಧ ಹೀನಾಯ ಸೋಲಿನ ನಂತರ ಪಾಕಿಸ್ತಾನದ ಮಾಜಿ ವೇಗಿ ವಾಸಿಮ್ ಅಕ್ರಮ್ ಅವರು ಪಾಕಿಸ್ತಾನ ಆಟಗಾರರ ಆಹಾರ ಪದ್ಧತಿಯನ್ನು ಟೀಕಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿ (ಹೈಬ್ರಿಡ್ ಮಾದರಿ) ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಭಾರತದ ವಿರುದ್ಧ ಮೊದಲ 2 ಪಂದ್ಯಗಳನ್ನು ಸೋತ ನಂತರ ಗುಂಪು ಹಂತದಲ್ಲಿ ಪಂದ್ಯಾವಳಿಯಿಂದ ಹೊರಬಿದ್ದಿದೆ.

ಪಾಕ್ ಸೆಮೀಸ್ ಆಸೆ ಜೀವಂತವಾಗಿರಲು ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆಲುವು ಸಾಧಿಸುವುದು ಅಗತ್ಯವಾಗಿತ್ತು. ಆದರೆ, ಸೋಮವಾರ ರಾವಲ್ಪಿಂಡಿಯಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾ ಟೈಗರ್ಸ್ ವಿರುದ್ಧ ಕಿವೀಸ್ ತಂಡ 5 ವಿಕೆಟ್​ಗಳಿಂದ ಗೆದ್ದು ಸೆಮಿಫೈನಲ್ ಪ್ರವೇಶಿಸಿದೆ. ಭಾರತವೂ ಅಧಿಕೃತವಾಗಿ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು. ಇದರ ಬೆನ್ನಲ್ಲೇ ವಾಸೀಂ ಅಕ್ರಮ್ ಪಾಕ್ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಡ್ರಿಂಕ್ಸ್ ಬ್ರೇಕ್​ ಸಮಯದಲ್ಲಿ ಬಾಳೆಹಣ್ಣುಗಳಿಂದ ತುಂಬಿದ ತಟ್ಟೆಯೊಂದನ್ನು ತಂದಿದ್...