ಭಾರತ, ಮಾರ್ಚ್ 25 -- ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಈಗ ಮಧುಬಲೆ (ಹನಿಟ್ರ್ಯಾಪ್) ಗದ್ದಲ ಜೋರಾಗಿದೆ. ಸಂವಿಧಾನಬದ್ಧವಾಗಿ ಸಚಿವರಾಗಿರುವವರು ನ್ಯಾಯಸಮ್ಮತವಾಗಿ ಅಧಿಕಾರ ನಡೆಸುವ ಬದಲು ಅಧಿಕಾರದ ದುರುಪಯೋಗ ಮಾಡಿಕೊಂಡು ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ. ಸಂವಿಧಾನಕ್ಕೆ ಅಪಚಾರ ಮಾಡುವ ಕೆಲಸಗಳು ರಾಜಕಾರಣಿಗಳಿಂದ ನಡೆಯುತ್ತಿದೆ. ಆದರೆ ಇದೆಲ್ಲವೂ ಕಣ್ಣೆದುರೇ ಆಗುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ ಶಿಕ್ಷೆ ನೀಡುವವರು. ರಾಜ್ಯದ ಚುಕ್ಕಾಣಿ ಹಿಡಿದವರು ಮಾಡುತ್ತಿರುವ ಈ ಕೆಲಸಗಳಿಗೆ ಹಿಡಿಯಬೇಕಿದೆ ಕನ್ನಡಿ, ಅಂತಹವರಿಗೆ ಆಗಬೇಕಿದೆ ಶಿಕ್ಷೆ. ರಾಜ್ಯದ ಪ್ರಸ್ತುತ ರಾಜಕಾರಣದ ಚಿತ್ರಣ ಬಿ‌ಚ್ಚಿಟ್ಟಿದ್ದಾರೆ ರಾಜೀವ ಹೆಗಡೆ. ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಅವರು ಬರೆದ ಬರಹದ ಯಥಾಪ್ರತಿ ಇಲ್ಲಿದೆ.

'ನನ್ನನ್ನು ಹನಿಟ್ರ್ಯಾಪ್‌ ಮಾಡುವ ಪ್ರಯತ್ನ ನಡೆದಿದೆ' ಎಂದು ಸರ್ಕಾರದ ಹಿರಿಯ ಸಚಿವ ರಾಜಣ್ಣ ಹೇಳುತ್ತಾರೆ. 'ನನ್ನ ಮೇಲೂ ಇಂತಹ ಪ್ರಯತ್ನವನ್ನು ನಡೆಸಿದ್ದರು. ನಮ್ಮ ಪಕ್ಷದವರೇ ಇದರ ಹಿಂದಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾ...