ಭಾರತ, ಮೇ 8 -- ನೈಸರ್ಗಿಕ ವಿಕೋಪಗಳು ಹಾಗೂ ಹವಾಮಾನ ವೈಪರೀತ್ಯಗಳನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಆದರೆ ಇವುಗಳ ಪರಿಣಾಮ ಮಾತ್ರ ಭೂಮಿ ಹಾಗೂ ಮನುಕುಲಕ್ಕೆ ಸಾಕಷ್ಟು ಅಪಾಯಗಳನ್ನು ಉಂಟು ಮಾಡುತ್ತದೆ. ಹಾಗಂತ ಭೂ ವಿಕೋಪಗಳನ್ನು ಊಹಿಸಲು ಅಸಾಧ್ಯ ಎಂದಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನಗಳ ಅಭಿವೃದ್ಧಿಯು ಇಂತಹ ವಿಕೋಪಗಳನ್ನು ಮೊದಲೇ ಊಹಿಸಲು ಸಹಾಯ ಮಾಡುತ್ತಿವೆ.

ಭೂವಿಜ್ಞಾನದ ಆಳವನ್ನು ಅರಿಯಲು ಸಹಾಯ ಮಾಡುವ ಉಪಗ್ರಹವೊಂದು ಅಮೆರಿಕ ಹಾಗೂ ಭಾರತದ ಬಾಹ್ಯಾಕಾಶ ಸಂಸ್ಥೆಗಳಾದ ನಾಸಾ ಹಾಗೂ ಇಸ್ರೋ ಸಹಯೋಗದಲ್ಲಿ ತಯಾರಾಗಿದೆ. ಇದರ ಬಗ್ಗೆ ಸ್ಪ್ಯಾನ್‌ ನಿಯತಕಾಲಿಕೆಗೆ ನಾಸಾದಲ್ಲಿ ವಿಜ್ಞಾನಿಯಾಗಿರುವ ಭಾರತೀಯ ಮೂಲದ ರಜತ್ ಬಿಂದ್ಲಿಷ್ ನೀಡಿರುವ ಸಂದರ್ಶನದ ಕನ್ನಡ ಅನುವಾದ ಇಲ್ಲಿದೆ.

ಉಪಗ್ರಹಗಳಿಂದ ಸಂಗ್ರಹಿಸಲಾಗುವ ನಿಖರವಾದ ದತ್ತಾಂಶವು ಸಮುದಾಯಗಳಿಗೆ ವಿಪತ್ತುಗಳಿಗೆ ಸಿದ್ಧರಾಗಲು, ಕೃಷಿ ಯೋಜನೆಗಳನ್ನು ರೂಪಿಸಲು ಮತ್ತು ತೀವ್ರ ಹವಾಮಾನದ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇದನ್ನು ಸಾಧ್ಯವಾಗಿಸುವ ಪ್ರಯತ್ನದಲ್ಲಿ ...