ಭಾರತ, ಫೆಬ್ರವರಿ 11 -- ಮಂಗಳೂರು: ಹಬ್ಬಗಳು ಕರಾವಳಿಯಲ್ಲಿ ಕೃಷಿ ಆಧಾರಿತ ಹಿನ್ನೆಲೆಯಲ್ಲಿ ಆಚರಿಸಲ್ಪತ್ತದೆ. ನೆಲಸಂಸ್ಕೃತಿಯನ್ನು ಬಿಂಬಿಸುವ ಆಚರಣೆಯೇ ಅಧಿಕ. ಕೆಡ್ಡಸ ಹಬ್ಬ ಅದರಲ್ಲೊಂದು. ಸಾಮಾನ್ಯವಾಗಿ ಮೂರುದಿನ ಕೆಡ್ಡಸ ಆಚರಿಸಲ್ಪಡುತ್ತದೆ. ಇದು ಶುರುಕೆಡ್ಡಸ, ನಡುಕೆಡ್ಡಸ ಮತ್ತು ಕಡೆಕೆಡ್ಡಸ ವೆಂದು ಆಚರಣೆಗೊಳ್ಳುತ್ತದೆ. ಫೆ.10ರಂದು ಸುರುಕೆಡ್ಡಸ, 11ರಂದು ನಡುಕೆಡ್ಡಸ 12ರಂದು ಕುಂಭಸಂಕ್ರಮಣದ ದಿನ ಕಡೆಕೆಡ್ಡಸ ನಡೆಯುತ್ತದೆ.

ಭೂಮಿಯನ್ನು ಹೆಣ್ಣೆಂದು ಪರಿಗಣಿಸಿ ಆರಾಧಿಸಲಾಗುತ್ತದೆ.. ಆದ್ದರಿಂದ ಹೆಣ್ಣಾದ ಭೂಮಿತಾಯಿಯು ವರ್ಷಕ್ಕೆ ಮೂರುದಿನ ರಜಸ್ವಲೆಯಾಗುತ್ತಾಳೆ (ಋತುಮತಿ) ಎಂದು ನಂಬಿಕೆ. ಈ ಹಿನ್ನೆಲೆಯಲ್ಲಿ ಕೆಡ್ಡಸವನ್ನು ಭೂಮಿತಾಯಿ ಮೀಯುವ ಹಬ್ಬವೆಂದು ಕರೆಯುತ್ತಾರೆ. ಋತುಮತಿ ಅಥವಾ ಪುಷ್ಪವತಿಯಾದ ಹೆಣ್ಣು ಹೆಂಗಸಾದಳು ಎಂದು ಅರ್ಥ. ಈ ಮೂಲಕ ಭೂಮಿದೇವಿಯು ಫಲವತಿಯಾಗುವ ಅರ್ಹತೆಯನ್ನು ಪಡೆಯುತ್ತಾಳೆ. ಆದ್ದರಿಂದ ಕೆಡ್ಡಸ ಹಬ್ಬವು ಫಲವಂತಿಕೆಯ ಸಂಕೇತವಾಗಿ ಆಚರಣೆಗೆ ಒಳಪಡುವ ತುಳುವರ ಪ್ರಮುಖ ಹಬ್ಬ.

ಕೆಡ್ಡಸದ ಸಮಯದಲ್...