Bengaluru, ಮೇ 20 -- ಅರ್ಥ: ಪ್ರಕೃತಿ ಮತ್ತು ಜೀವಿಗಳು ಅನಾದಿ ಎಂದು ತಿಳಿಯಬೇಕು. ಅವರ ಮಾರ್ಪಾಡುಗಳೂ ಗುಣಗಳೂ ಪ್ರಕೃತಿಯಿಂದ ಆದವು.

ಭಾವಾರ್ಥ: ಈ ಅಧ್ಯಾಯದಲ್ಲಿ ನೀಡಿರುವ ಜ್ಞಾನದಿಂದ ಕ್ಷೇತ್ರವನ್ನೂ, ಕ್ಷೇತ್ರಜ್ಞರನ್ನೂ (ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮರನ್ನೂ) ಅರ್ಥಮಾಡಿಕೊಳ್ಳಬಹುದು. ದೇಹವು ಕ್ಷೇತ್ರ; ಇದು ಐಹಿಕ ಪ್ರಕೃತಿಯಿಂದ ಆದದ್ದು, ದೇಹಧಾರಿಯಾಗಿ ದೇಹದ ಚಟುವಟಿಕೆಗಳನ್ನು ಸವಿಯುತ್ತಿರುವ ವ್ಯಕ್ತಿಗತ ಆತ್ಮವು ಪುರುಷ ಅಥವಾ ಜೀವಿ. ಅವನೊಬ್ಬ ಕ್ಷೇತ್ರಜ್ಞ; ಇನ್ನೊಬ್ಬನು ಪರಮಾತ್ಮ. ಪರಮಾತ್ಮನೂ, ವ್ಯಕ್ತಿಯ ಆತ್ಮವೂ ದೇವೋತ್ತಮ ಪರಮ ಪುರುಷನ ಬೇರೆ ಬೇರೆ ಅಭಿವ್ಯಕ್ತಿಗಳು ಎಂಬುದನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮನು ಭಗವಂತನ ಶಕ್ತಿಯ ವರ್ಗಕ್ಕೆ ಸೇರಿದವನು; ಪರಮಾತ್ಮನು ಭಗವಂತನ ಸ್ವಾಂಶ ವಿಸ್ತರಣೆಗೆ ಸೇರಿದವನು.

ಪ್ರಕೃತಿಯೂ ಜೀವಿಯೂ ನಿತ್ಯವಾದವರು. ಎಂದರೆ, ಅವರು ಸೃಷ್ಟಿಗೆ ಮೊದಲೇ ಇದ್ದರು. ಪ್ರಕೃತಿಯ ಅಭಿವ್ಯಕ್ತಿಯು ಪರಮ ಪ್ರಭುವಿನ ಶಕ್ತಿಯಿಂದ ಆದದ್ದು. ಜೀವಿಗಳೂ ಹಾಗೆಯೇ. ಆದರೆ ಜೀವಿಗಳು ಶ್ರೇ...