ಭಾರತ, ಫೆಬ್ರವರಿ 27 -- ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಭೂಮಿಕಾಳಿಗೆ ಶಕುಂತಲಾ "ನಿಜ" ಹೇಳುತ್ತಾರೆ. ಸಮಸ್ಯೆ ಇರುವುದು ಗೌತಮ್‌ನಲ್ಲಿ ಅಲ್ಲ, ನಿನ್ನಲ್ಲಿ ಎಂಬ ವಿವರ ನೀಡುತ್ತಾರೆ. ಈ ಮೂಲಕ ಭೂಮಿಕಾಳಿಗೆ ನೋವು ಉಂಟು ಮಾಡುವುದು ಶಕುಂತಲಾ ಉದ್ದೇಶ. ನಿಜ ಏನೆಂದರೆ, ಭೂಮಿಕಾಗೆ ಗರ್ಭಕೋಶದ ಯಾವುದೇ ಸಮಸ್ಯೆ ಇಲ್ಲ. ಇದೆಲ್ಲವೂ ಶಕುಂತಲಾದೇವಿಯ ಕೈವಾಡ. ಡಾಕ್ಟರ್‌ ಮೂಲಕ ಶಕುಂತಲಾದೇವಿಯೇ ಸುಳ್ಳು ಹೇಳಿಸಿದ್ದಾರೆ. ಆದರೆ. ಇದ್ಯಾವುದು ತಿಳಿಯದೆ ಗೌತಮ್‌ ಮತ್ತು ಭೂಮಿಕಾ ಸಾಕಷ್ಟು ನೋವು ಅನುಭವಿಸುತ್ತಾರೆ.

ಶಕುಂತಲಾದೇವಿ ತನ್ನ ಮಗ ಜೈದೇವ್‌ ಮತ್ತು ಸಹೋದರ ಲಕ್ಕಿ ಲಕ್ಷ್ಮಿಕಾಂತ್‌ ಬಳಿ ಮಾತನಾಡುತ್ತಿದ್ದಾರೆ. "ಸಮಸ್ಯೆ ಇರುವುದು ಭೂಮಿಕಾ ಬಳಿ ಅಲ್ವಾ, ಈ ಸತ್ಯ ಅವಳಿಗೆ ತಿಳಿಸಿ, ಅವಳು ಈ ಮನೆಯಲ್ಲಿ ಇರದಂತೆ ಮಾಡುವೆ" ಎಂದು ಶಕುಂತಲಾದೇವಿ ಹೇಳುತ್ತಾರೆ. "ಇದನ್ನು ಹೇಗೆ ಎಕ್ಸಿಕ್ಯುಟ್‌ ಮಾಡ್ತಿಯಾ" ಎಂದು ಜೈದೇವ್‌ ಕೇಳುತ್ತಾನೆ. "ನಾನು ಮಾಡಿದ ಸ್ಟೋರಿ ಅಷ್ಟು ಬಲವಾಗಿದೆ" ಎಂದು ಶಕುಂತಲಾ ದೇವಿ ಹೇಳುತ್ತಾರೆ.

ಇನ್ನೊ...