Delhi, ಮಾರ್ಚ್ 28 -- ಮ್ಯಾನ್ಮಾರ್ ಹಾಗು ಅದಕ್ಕೆ ಹೊಂದಿಕೊಂಡಂತೆ ಇರುವ ಪ್ರವಾಸಿ ದೇಶ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಭೂಕಂಪಕ್ಕೆ ಅಕ್ಷರಶಃ ನಲುಗಿವೆ. ನಡುಗಿನ ಭೂಮಿ, ಇದರಿಂದ ಕಟ್ಟಡಗಳು ಕಣ್ಣಮುಂದೆಯೇ ಕುಸಿದ ಭೀಕರ ಸನ್ನಿವೇಶ. ನಿಜಕ್ಕೂ ಇವುಗಳ ವಿಡಿಯೋಗಳನ್ನು ನೋಡಿದರೆ ಎಂತವರ ಎದೆಯೂ ಒಮ್ಮೆಗೆ ಝಲ್ಲೆನ್ನದೇ ಇರದು. ಶುಕ್ರವಾರ ಮ್ಯಾನ್ಮಾರ್‌ನ ಮಂಡಲೇಯಲ್ಲಿಸಂಭವಿಸಿ 7.7 ತೀವ್ರತೆಯ ಪ್ರಬಲ ಭೂಕಂಪ ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ಮತ್ತು ಉತ್ತರದ ನಗರವಾದ ಚಿಯಾಂಗ್ ಮೈವರೆಗೆ ಕಂಪನಗಳು ವಿಸ್ತರಣೆಯಾದವು. ಎರಡೂ ದೇಶಗಳಲ್ಲಿ ವ್ಯಾಪಕ ಹಾನಿಯನ್ನು ತೋರಿಸುವ ವಿಡಿಯೋಗಳು ಹರಿದಾಡುತ್ತಿವೆ. ಒಂದರಲ್ಲಿ ಬ್ಯಾಂಕಾಕ್‌ನ ಚಾಟುಚಾಕ್ ಮಾರುಕಟ್ಟೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಿದ್ದಿರುವುದನ್ನು ಕಾಣಬಹುದು. ಇನ್ನೊಂದು ಮ್ಯಾನ್ಮಾರ್‌ನ ಆವಾ ಮತ್ತು ಸಾಗೈಂಗ್ ಪ್ರದೇಶಗಳನ್ನು ಸಂಪರ್ಕಿಸುವ ಪ್ರಸಿದ್ಧ ಆವಾ ಸೇತುವೆ ಕುಸಿದಿರುವುದರ ಚಿತ್ರಣವನ್ನು ದಾಖಲು ಮಾಡಲಾಗಿದೆ.
Published by HT Digital Content ...
Click here to read full article from source
To read the full article or to get the complete feed from this publication, please
Contact Us.