Bangalore, ಮಾರ್ಚ್ 19 -- Sunita Williams return: ಭೂಮಿಯಿಂದ ಹಲವು ಕಿಲೋಮೀಟರ್‌ ದೂರದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತೇಲುತ್ತ ಬರೋಬ್ಬರಿ ಒಂಬತ್ತು ತಿಂಗಳ ಕಾಲ ಬದುಕುಳಿದ ಬಂದ ಸುನೀತಾ ವಿಲಿಯಮ್ಸ್, ಬಚ್‌ ವಿಲ್ಮೋರ್‌ ಎಂಬ ಗಗನಯಾನಿಗಳು ಇಂದು ಎಲ್ಲರ ಆಕರ್ಷಣೆಯ ಕೇಂದ್ರಬಿಂದು. ಅಂತರಿಕ್ಷದಲ್ಲಿ ಸೀಮಿತ ಸೌಲಭ್ಯಗಳು ಇರುತ್ತವೆ. ತಿನ್ನಲು ಆಹಾರ, ಕುಡಿಯಲು ಪಾನೀಯ ಸೀಮಿತವಾಗಿರುತ್ತದೆ. ಅಂತರಿಕ್ಷ ನಿಲ್ದಾಣದಲ್ಲಿ ಕೆಲವು ದಿನಗಳು ಅಥವಾ ಕೆಲವು ತಿಂಗಳು ಇದ್ದು ಬಂದಾಗ ಸ್ನಾಯುಗಳ ನಷ್ಟ, ದೇಹದಲ್ಲಿ ನಿರ್ಜಲೀಕರಣ, ಮೂತ್ರಪಿಂಡದ ಕಲ್ಲುಗಳು, ದೃಷ್ಟಿ ಸಮಸ್ಯೆಗಳು ಮತ್ತು ಸಮತೋಲನ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುತ್ತವೆ. ಆದರೆ, ಈ ಇಬ್ಬರು ಗಗನಯಾನಿಗಳು ಒಂದು ವಾರದಲ್ಲಿ ವಾಪಸ್‌ ಬರಲೆಂದು ಹೋದವರು ಅನಿವಾರ್ಯ ಕಾರಣಗಳಿಂದ ಒಂಬತ್ತು ತಿಂಗಳು ಅಲ್ಲೇ ಇರಬೇಕಾಯಿತು. ಇಷ್ಟು ಸಮಯ ಅವರು ಹೊಟ್ಟೆಗೆ ಏನು ತಿನ್ನುತ್ತಿದ್ದರು? ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು.

ನಾಸಾ ಗಗನಯಾತ್ರಿಗಳಾದ ಬುಚ್ ವಿ...