ಭಾರತ, ಮಾರ್ಚ್ 24 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವಿನ ಆರಂಭ ಕಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತನ್ನ ಪ್ರತಾಪ ತೋರುವ ಮೂಲಕ ಗಮನ ಸೆಳೆದಿದೆ. ಸಮತೋಲಿತ ತಂಡವಾದ ಆರ್​​ಸಿಬಿ, ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕುವ ವಿಶ್ವಾಸ ಮೂಡಿಸಿದೆ. 18ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರೈಡ್ ಮಾಡಿದ ಆರ್​ಸಿಬಿ ತನ್ನ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮಾರ್ಚ್​ 28ರಂದು ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಕೋಲ್ಕತ್ತಾದ ಈಡನ್ ಗಾರ್ಡನ್ಸ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ನಿಗದಿತ 20 ಓವರ್​​​​​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿತು. 175 ರನ್​ ಗುರಿ ಬೆನ್ನಟ್ಟಿದ ಆರ್​ಸಿಬಿ 3 ವಿಕೆಟ್ ನಷ್ಟಕ್ಕೆ 177 ರನ್ ಪೇರಿಸಿತು. 7 ವಿಕೆಟ್​ಗಳ ಜಯ ದಾಖಲಿಸಿದ ಬೆಂಗಳೂರು, ಇದೀಗ ಸಿಎಸ್​ಕೆ ವಿರುದ್ಧ ಇಂತಹದ್ದೇ ಸರ್ವಾಂಗೀಣ ಪ್ರದರ್ಶನ ತೋರಲು ಕಸರತ್ತು ನಡೆಸುತ್ತಿದೆ. ಈ...