ಭಾರತ, ಏಪ್ರಿಲ್ 2 -- ಶ್ರೀ ಶ್ರೀ 1008 ಶ್ರೀ ಸುವಿದ್ಯೇಂದ್ರ ತೀರ್ಥರ ಅನುಗ್ರಹದಿಂದ ಜುಲೈ 13ನೇ ತಾರೀಕಿನ ಭಾನುವಾರದಂದು ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿ ಇರುವಂಥ ಭುವನಗಿರಿ ರಾಯರ ಮಠದಲ್ಲಿ ವಿಷ್ಣು ಸಹಸ್ರನಾಮ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಅದಕ್ಕೆ ಪೂರ್ವಭಾವಿಯಾಗಿ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ವಿಷ್ಣು ನಾಮ ಲೇಖನವನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ಏಪ್ರಿಲ್ 6, 2025ರ ಭಾನುವಾರದಿಂದ ಪ್ರತಿ ಭಾನುವಾರದಂದು, ಅಂದರೆ ಜುಲೈ 6ನೇ ತಾರೀಕಿನ ತನಕ, ಪ್ರತಿ ವಾರ ಸಂಜೆ 4 ಗಂಟೆಯಿಂದ 6.30ರ ತನಕ ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟಿನಲ್ಲಿ ಇರುವಂಥ ಭುವನಗಿರಿ ರಾಯರ ಮಠದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಲಿದೆ.

ಯಾರಿಗೆ ಮಠಕ್ಕೇ ಬಂದು ವಿಷ್ಣು ಸಹಸ್ರನಾಮ ಸಾಮೂಹಿಕ ಪಾರಾಯಣದಲ್ಲಿ ಭಾಗೀ ಆಗಲು ಸಾಧ್ಯವೋ ಅಂಥವರು ಸ್ವತಃ ಪಾಲ್ಗೊಳ್ಳಬಹುದು. ಇನ್ನುಳಿದಂತೆ ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂಬ ಇಚ್ಛೆ ಇರುವಂಥವರಿಗೆ ಲೇಖನ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಎಷ್ಟು ಬಾರಿ ವಿಷ್ಣು...