ಭಾರತ, ಫೆಬ್ರವರಿ 4 -- ಮಾಘ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು 'ಭೀಷ್ಮ ದ್ವಾದಶಿ' ವ್ರತವನ್ನು ಆಚರಿಸಬೇಕು. ಪಿತಾಮಹ ಭೀಷ್ಮರನ್ನು ಸ್ಮರಿಸುವ ಮೂಲಕ ಕೆಲವರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ. ಈ ದಿನದಂದು ತಿಲ ಸ್ನಾನ ಮಾಡಿದಲ್ಲಿ ವಿಶೇಷವಾದ ಫಲಗಳು ದೊರೆಯುತ್ತದೆ. ನದಿ ತೀರದಲ್ಲಿ ವಿಷ್ಣುವಿನ ಪೂಜೆಯಿಂದ ನಿರೀಕ್ಷಿತ ಫಲಗಳು ದೊರೆಯುತ್ತವೆ. ತಿಲದಿಂದ (ಎಳ್ಳು) ತಯಾಸಿದ ಆಹಾರ ಪದಾರ್ಥವನ್ನು ನೇವೈದ್ಯವಾಗಿ ಅರ್ಪಿಸಬೇಕು.

ಭೀಷ್ಮ ಪಿತಾಮಹರು ಇಚ್ಛಾಮರಣಿಗಳು. ತಮ್ಮ ಮನದ ಆಸೆಯಂತೆ ಶರಶಯ್ಯೆಯಲ್ಲಿ ಇದ್ದ ಭೀಷ್ಮರು ಪೌರಾಣಿಕ ಹಿನ್ನೆಲೆಯ ಪ್ರಕಾರ ಮಾಘ ಶುದ್ದ ಅಷ್ಟಮಿಯ ತಿಥಿಯಂದು ತಮ್ಮ ದೇಹ ತ್ಯಾಗ ಮಾಡುತ್ತಾರೆ. ಆದರೆ ಇದನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ. ಆದ್ದರಿಂದಲೇ ಭೀಷ್ಮಅಷ್ಟಮಿ ಮತ್ತು ಭೀಷ್ಮದ್ವಾದಶಿ ಎಂಬ ಹೆಸರುಗಳು ಬಂದಿವೆ. ಇದೇ ಶರಶಯ್ಯೆಯಲ್ಲಿ ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮವನ್ನು ಧರ್ಮರಾಯನಿಗೆ ಉಪದೇಶ ಮಾಡಿದ್ದು.

ಈ ವರ್ಷ ಭೀಷ್ಮ ದ್ವಾದಶಿ ತಿಥಿಯು ಫೆಬ್ರುವರಿ 9, ಭಾನುವಾರ ಬಂದಿದೆ. ಮಹಾಭಾರತ...