Bangalore, ಏಪ್ರಿಲ್ 20 -- ಅವರು ಓದಿದ್ದು ಭೂಗರ್ಭಶಾಸ್ತ್ರ. ಕೆಲಸ ಮಾಡಿದ್ದು ಪೊಲೀಸ್‌ ಇಲಾಖೆಯಲ್ಲಿ. ಕರ್ನಾಟಕದಲ್ಲಿ 24 ವರ್ಷಕ್ಕೆ ಭಾರತೀಯ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ನಂತರ ಐಪಿಎಸ್‌ ಹುದ್ದೆಗೆ ಆಯ್ಕೆಯಾಗಿ ಕರ್ನಾಟಕ ಸೇವೆಗೆ ಬಂದಿದ್ದರು. ಸತತ 36 ವರ್ಷಗಳ ಕಾಲ ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಎಸ್ಪಿಯಾಗಿದ್ದಾಗ ಕೋಮುಗಲಭೆಯಂತಹ ಸನ್ನಿವೇಶಗಳನ್ನು ನಿಯಂತ್ರಿಸಿದ್ದರು. ಬೆಳಗಾವಿಯಲ್ಲಿ ಉತ್ತರ ವಲಯ ಐಜಿಯಾಗಿದ್ದಾಗಲೂ ಸಮರ್ಥವಾಗಿಯೇ ಕೆಲಸ ಮಾಡಿದ್ದರು. ಸಾರಿಗೆ ಆಯುಕ್ತರಾಗಿಯೂ ಕೆಲಸ ಮಾಡಿದ ಅನುಭವ ಪಡೆದುಕೊಂಡಿದ್ದರು. ಪೊಲೀಸ್‌ ಇಲಾಖೆಯ ತರಬೇತಿ, ಗುಪ್ತಚರ, ಲೋಕಾಯುಕ್ತ, ಆಡಳಿತ, ಗೃಹ ರಕ್ಷಕ ದಳ ಹೀಗೆ ವಿವಿಧ ಹಂತಗಳಲ್ಲಿ ಕೆಲಸ ಮಾಡಿ ಕರ್ನಾಟಕ ಪೊಲೀಸ್‌ ಪಡೆಗಳ ಮುಖ್ಯಸ್ಥರಾಗಿಯೂ ಒಂದೂವರೆ ವರ್ಷ ಸೇವೆ ಸಲ್ಲಿಸಿದ್ದರು. ನಿವೃತ್ತಿ ಜೀವನದಲ್ಲಿದ್ದಾಗಲೇ ದುರಂತ ಅಂತ್ಯ ಕಂಡಿದ್ದಾರೆ. ಇದು ಕರ್ನಾಟಕದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಓಂಪ್ರಕಾಶ್‌ ಅವರ ಹ...