Bengaluru, ಏಪ್ರಿಲ್ 29 -- ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸಿನಿಮಾ ಯುದ್ಧಕಾಂಡ. ಏಪ್ರಿಲ್‌ 18ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಸಿನಿಮಾವನ್ನು ಕರ್ನಾಟಕದ ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಅತ್ಯಾಚಾರ ಹಿನ್ನೆಲೆಯಲ್ಲಿ ಮೂಡಿಬಂದ ಈ ಸಿನಿಮಾಕ್ಕೆ ವಿಮರ್ಶೆ ದೃಷ್ಟಿಯಿಂದ ಪಾಸಿಟಿವ್‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಜಯ್‌ ರಾವ್‌ ನಾಯಕನಾಗಿ ಮಾತ್ರವಲ್ಲದೆ, ನಿರ್ಮಾಪಕನಾಗಿಯೂ ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಇಂತಿಪ್ಪ ಸಿನಿಮಾ ಇದೀಗ ಇನ್ನೇನು 25ನೇ ದಿನದತ್ತ ಸಾಗುತ್ತಿದೆ. ಈ ನಡುವೆ ಇದೇ ಸಿನಿಮಾಕ್ಕೆ ಮ್ಲಟಿಫ್ಲೆಕ್ಸ್‌ ಕಡೆಯಿಂದ ಅನ್ಯಾಯವಾಗುತ್ತಿದೆ ಎಂದು ಸ್ವತಃ ಅಜಯ್‌ ರಾವ್‌ ಆರೋಪ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾಗಳಿಗೆ ಮಲ್ಟಿಫ್ಲೆಕ್ಸ್‌ಗಳಿಂದ ಅನ್ಯಾಯ ಆಗುತ್ತಿರುವುದು ಇದೇ ಮೊದಲೇನಲ್ಲ. ಈ ಬಗ್ಗೆ ಸಾಕಷ್ಟು ಹೊಸ ತಂಡಗಳು, ಮಲ್ಟಿಫ್ಲೆಕ್ಸ್‌ ನಡೆಯ ಬಗ್ಗೆ ಕಿಡಿ ಕಾರಿದ ಉದಾಹರಣೆಗಳಿವೆ. ವಾಣಿಜ್ಯ ಮಂಡಳಿ ವಿರುದ್ಧವೂ ಧ್ವನಿ ಎತ್ತಿದ್ದೂ ಉಂಟು. ಆದರೆ, ಯ...