ಭಾರತ, ಏಪ್ರಿಲ್ 16 -- ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿಚಾರ ಚರ್ಚೆ ನಡೆಯುತ್ತಿರುವಾಗಲೇ, ಆಹಾರ ಸಂಸ್ಕೃತಿ ಮೇಲೆ ಉತ್ತರ ಭಾರತೀಯರ ಹೇರಿಕೆಯ ವಿಚಾರ ಮುನ್ನೆಲೆಗೆ ಬಂದಿದೆ. ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಮಲಯಾಳಂ ಲೇಖಕ ಎಂಎಸ್ ಮಾಧವನ್ ಅವರು, ದಕ್ಷಿಣ ಭಾರತದ ವಂದೇ ಭಾರತ್ ರೈಲುಗಳ ಮೆನುವಿನಲ್ಲಿರುವ ಆಹಾರಗಳನ್ನು ಗಮನಿಸುವಂತೆ ಹೇಳಿದ್ದು, ಇದು ಆಹಾರ ಸಂಸ್ಕೃತಿಯ ಹೇರಿಕೆ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ. ಇದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಎಂಎಸ್ ಮಾಧವನ್ ಅವರು, "ಅವರು ಭಾಷಾ ಹೇರಿಕೆ ಬಗ್ಗೆ ಮಾತನಾಡುತ್ತಾರೆ. ಆಹಾರ ಹೇರಿಕೆ ಬಗ್ಗೆ ಏನು ಹೇಳುವುದು, ದಕ್ಷಿಣ ಭಾರತದ ವಂದೇ ಭಾರತ್ ರೈಲುಗಳಲ್ಲಿ ಪೂರೈಸುವ ಆಹಾರಗಳನ್ನೊಮ್ಮೆ ನೋಡಿ. ಇದು ಬೆಂಗಳೂರು- ಕೊಯಮತ್ತೂರು ವಂದೇ ಭಾರತ್ ರೈಲಿನಲ್ಲಿ ಒದಗಿಸಿದ ಆಹಾರ" ಎಂದು ವಂದೇ ಭಾರತ್ ಮೆನುವಿನ ಕಡೆಗೆ ಗಮನಸೆಳೆದಿದ್ದಾರೆ. ಪ್ರಾದೇಶಿಕ ಆಹಾರ ಸಂಸ್ಕೃತಿಯನ್ನು ಗಮನಿಸದೇ ವಂದೇ ಭಾರತ್ ರೈಲುಗಳಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸುವ ಐಆರ್‌ಸಿಟಿಸಿ, ಭಾರತೀಯ ರೈಲ್ವೆ...