ಭಾರತ, ಮಾರ್ಚ್ 29 -- Language War: ಭಾಷೆಯ ವಿಚಾರವಾಗಿ ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ "ಸವಾರಿ" ವಿಚಾರ ಭಾರಿ ಚರ್ಚೆಯಾಗುತ್ತಿದೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆಯಿಂದ ಹಿಡಿದು ಹಿಂದಿ ಭಾಷೆ ಹೇರಿಕೆ ವಿಚಾರದ ತನಕ ಹತ್ತಾರು ಅಂಶಗಳು ಚರ್ಚೆಗೆ ಒಳಗಾಗಿದೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಈ ವಿಚಾರದಲ್ಲಿ ತುಸು ಏರುದನಿಯಲ್ಲೇ ಮುಂದುವರಿದಿದ್ದು, ಕೇಂದ್ರ ಸರ್ಕಾರವೂ ಪ್ರತಿಕ್ರಿಯೆ ನೀಡಬೇಕಾದ ರಾಜಕೀಯ ಅನಿವಾರ್ಯವನ್ನು ಸೃಷ್ಟಿಸಿದ್ದಾರೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆ ವಿಚಾರವಾಗಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತು ನಂಬಬೇಡಿ ಎಂದು ಹೇಳಿದ್ದು ಗಮನಸೆಳೆದಿತ್ತು. ಈ ವಿಚಾರಗಳ ಪೈಕಿ ನಾವು ಭಾಷಾ ಸಂಘರ್ಷವನ್ನೇ ಕೇಂದ್ರವಾಗಿಟ್ಟುಕೊಂಡು ಚೆನ್ನೈನಲ್ಲಿ ತಮಿಳು ಭಾಷೆ - ಮದ್ರಾಸ್ ಭಾಷೈ ಆಗಿ ಅಸ್ತಿತ್ವ ಉಳಿಸಿಕೊಂಡು ಹೋಗುತ್ತಿರುವುದು ಹೇಗೆ ಎಂಬುದನ್ನು ಅರಿಯೋಣ.

ಚೆನ್ನೈನಲ್ಲಿ ಸದ್ಯ ಶೇಕಡ 78.3 ರಷ್ಟು ಜನ ತಮಿಳು ಭಾಷೆಯಲ್ಲೇ ...