Bengaluru, ಮಾರ್ಚ್ 22 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶುಕ್ರವಾರ ಮಾರ್ಚ್ 21ರ ಸಂಚಿಕೆಯಲ್ಲಿ ಭಾವನಾ ಮತ್ತು ಸಿದ್ದೇಗೌಡ, ವಿದೇಶಕ್ಕೆ ಹನಿಮೂನ್ ಹೊರಡುವ ಸಿದ್ಧತೆಯಲ್ಲಿದ್ದಾರೆ. ಅವರ ಪ್ರಯಾಣದ ಕುರಿತು ಮರಿಗೌಡ ಎಲ್ಲ ರೀತಿಯ ವ್ಯವಸ್ಥೆ ಮಾಡಿದ್ದಾನೆ, ಜವರೇಗೌಡ್ರು ಕೂಡ ಖುದ್ದು ಇವರ ಪ್ರಯಾಣದ ಬಗ್ಗೆ ಮುತುವರ್ಜಿ ವಹಿಸಿ ಅವರಿಬ್ಬರನ್ನೂ ಕಳುಹಿಸಿಕೊಡಲು ಮುಂದಾಗಿದ್ದಾರೆ. ಪ್ರಯಾಣದ ವ್ಯವಸ್ಥೆ ಬಗ್ಗೆ ಮಾತನಾಡುತ್ತಿರುವಾಗಲೇ, ಮರಿಗೌಡನ ಪತ್ನಿ ವಿನು ಬಂದು, ಅವನ ಬಳಿ ಕೊಂಕು ಮಾತನಾಡುತ್ತಾಳೆ. ನಾವು ಮದುವೆಯಾಗಿ ಇಷ್ಟು ವರ್ಷವಾದರೂ, ಒಮ್ಮೆಯೂ ನೀವು ನನ್ನನ್ನು ಹೊರಗಡೆ ಕರೆದುಕೊಂಡು ಹೋಗಿಲ್ಲ, ಈಗ ನೋಡಿದರೆ ನೀವು ಅವರನ್ನು ಕಳುಹಿಸುತ್ತಿದ್ದೀರಿ, ನಂದೂ ಒಂದು ಜನ್ಮ ಎಂದು ಹೀಯಾಳಿಸಿ ಹೋಗುತ್ತಾಳೆ.

ಆಗ ಮರಿಗೌಡ, ಅವರಿಬ್ಬರೂ ಹೊಸದಾಗಿ ಮದುವೆಯಾಗಿದ್ದಾರೆ, ಈಗ ಹೋದರೆ ತಪ್ಪೇನು? ನಾವು ಕೂಡ ಹೋಗಬಹುದು, ಆದರೆ ನಮ್ಮದು ಈಗ ಹನಿಮೂನ್ ಹೋಗುವ ವಯಸ್ಸಲ್ಲ ಎಂದು ಹೇಳುತ್ತಾನೆ. ಆದರೆ ವಿನುವಿಗೆ ಸಮಾ...