ಭಾರತ, ಏಪ್ರಿಲ್ 1 -- ಬೇಸಿಗೆಯಲ್ಲಿ ಬಗೆಬಗೆಯ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ. ಅದರಲ್ಲಿ ಜನರು ಕಾದು ತಿನ್ನುವ ಹಣ್ಣುಗಳಲ್ಲಿ ಮಾವಿನ ಹಣ್ಣಿಗೆ ಅಗ್ರಸ್ಥಾನ. ಬೇಸಿಗೆಯ ಕೊನೆಯ ತಿಂಗಳುಗಳಲ್ಲಿ ಹಣ್ಣುಗಳ ರಾಜನ ರುಚಿ ಸವಿಯಲು ಜನರು ಎದುರು ನೋಡುತ್ತಿರುತ್ತಾರೆ. ಮಾರುಕಟ್ಟೆಗೆ ಬರುತ್ತಿರುವಂತೆ ಮುಗಿಬಿದ್ದು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ಕರ್ನಾಟಕದ ಜನರ ಕಾಯುವಿಕೆ ಇನ್ನಷ್ಟು ವಿಳಂಬವಾಗಲಿದೆ. ಜನವರಿ ತಿಂಗಳಿನಿಂದಲೇ ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಿದ್ದು, ಮಾವು ಬೆಳೆಗಾರರಿಗೂ ಬಿಸಿ ಮುಟ್ಟಿದೆ. ಹೀಗಾಗಿ ಈ ಬಾರಿ ಮಾರುಕಟ್ಟೆಗೆ ಮಾವಿನ ಹಣ್ಣು ನಿರೀಕ್ಷೆಗಿಂತ ತಡವಾಗಿ ಬರುವ ಸಾಧ್ಯತೆ ಇದೆ.

ಭಾರಿ ಬಿಸಿಲಿನಿಂದಾಗಿ ಕರ್ನಾಟಕದಲ್ಲಿ ಮಾವು ಬೆಳೆಯುವ ಕೆಲವು ಜಿಲ್ಲೆಗಳಲ್ಲಿ ಹೂ ಬಿಟ್ಟಿರುವುದು ತಡವಾಗಿದ್ದು ಇದಕ್ಕೆ ಪ್ರಮುಖ ಕಾರಣ. ಕರ್ನಾಟಕದಲ್ಲಿ ಮಾವಿನ ಹಣ್ಣುಗಳನ್ನು ಪ್ರಾಥಮಿಕವಾಗಿ ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಬೆಳೆಯಲಾ...