ಭಾರತ, ಮಾರ್ಚ್ 15 -- ಬೆಂಗಳೂರು: ಒಣಮೆಣಸಿನಕಾಯಿ ಬೆಲೆ ಕುಸಿತವು ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇತರ ಬೆಳೆಗಳು ಕೈಕೊಟ್ಟರೂ, ಮೆಣಸಿನಕಾಯಿ ಕೈ ಹಿಡಿಯುತ್ತೆ ಎಂಬ ಭಾರಿ ನಿರೀಕ್ಷೆಯೊಂದಿಗೆ ಈ ಬಾರಿ ಬೆಳೆ ಬೆಳೆದಿದ್ದ ರೈತರಿಗೆ, ಬೆಳೆ ಇಳಿಕೆ ಘಾಟು ಮುಗಿಗೆ ಬಡಿದಿದೆ. ಪ್ರತಿ ಬಾರಿ ಇಳುವರಿ ಸಮಸ್ಯೆಯಾದರೆ, ಈ ಬಾರಿ ಇಳುವರಿ ಉತ್ತಮವಾಗಿಯೇ ಇದೆ. ಆದರೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಜಮೀನಿಗೆ ಹೋಗಲು ಅನ್ನದಾತ ಹಿಂದೇಟು ಹಾಕುವಂತಾಗಿದೆ. ದರ ಕುಸಿತದಿಂದಾಗಿ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಮೆಣಸು ಖರೀದಿಗೆ ಬರುತ್ತಿದ್ದಾರೆ. ಕಷ್ಟಪಟ್ಟು ದುಬಾರಿ ಖರ್ಚು ಮಾಡಿ ಬೆಳೆ ಬೆಳೆದಿರುವ ರೈತರು ಇದೀಗ ಮೆಣಸಿನ ಖಾರಕ್ಕಿಂತ ಹೆಚ್ಚು ನೋವು ಅನುಭವಿಸುವಂತಾಗಿದೆ.

ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಈ ಬಾರಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗಿದೆ. ಉತ್ತರ ಕರ್ನಾಟಕದಲ್ಲಿ ವಿಜಯಪುರ, ಬಳ್ಳಾರಿ ಸೇರಿದಂತೆ 10 ಜಿಲ್ಲೆಗಳಲ್ಲಿ ಬೆಳೆ ಬೆಳೆಯಲಾಗುತ್ತಿದ್ದು, ಹಲವು ಕಡೆ ಉತ್ತಮ ಇಳುವರಿ ಬಂದಿದೆ. ಆದರೆ, ಬೆಲೆ ಕಡಿಮೆಯಾಗಿರುವುದರಿಂದ ಬೆ...