ಭಾರತ, ಮೇ 2 -- ಅಕ್ಟೋಬರ್ 4ರಂದು ಟೆಕ್ಸಾನ್​​ನ ಆರ್ಲಿಂಗ್ಟನ್​ ಎಸ್ಪೋರ್ಟ್ಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಯುಎಸ್ಎ ಐದು ಬೋರ್ಡ್ ತಂಡಗಳ ಚೆಸ್ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್ ಗುಕೇಶ್ ಅವರು ವಿಶ್ವದ 2ನೇ ಶ್ರೇಯಾಂಕದ ಹಿಕಾರು ನಕಮುರಾ ವಿರುದ್ಧ ಸೆಣಸಾಟ ನಡೆಸಲಿದ್ದಾರೆ. ಹಾಗೆಯೇ ಫ್ಯಾಬಿಯಾನೊ ಕರುವಾನಾ ವಿರುದ್ಧ ಭಾರತದ ಅರ್ಜುನ್ ಎರಿಗೈಸಿ ಮತ್ತು ಕ್ಯಾರಿಸ್ಸಾ ಯಿಪ್ ವಿರುದ್ಧ ದಿವ್ಯಾ ದೇಶ್​ಮುಖ್ ಕಾದಾಟ ನಡೆಸಲಿದ್ದಾರೆ. ಪಂದ್ಯದ 2ನೇ ಹಂತವು ನಂತರ ಭಾರತದಲ್ಲಿ ನಡೆಯುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಯುಎಸ್ಎ ಮತ್ತು ಭಾರತ 5 ಸುತ್ತುಗಳನ್ನು ಒಳಗೊಂಡಿರುತ್ತವೆ. 2500 ಆಸನಗಳ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮುಂದೆ ಒಂದು ಸಮಯದಲ್ಲಿ ಒಂದು ಬೋರ್ಡ್​​​ನೊಂದಿಗೆ ಆಡಲಾಗುತ್ತದೆ. ಆಟಗಾರರಿಗೆ ಪ್ರತಿ ಪಂದ್ಯಕ್ಕೆ 10 ನಿಮಿಷಗಳು ಇರುತ್ತವೆ ಮತ್ತು ಡ್ರಾಗೊಂಡರೆ, ಓವರ್​​ಟೈಮ್ ಆದರೆ ಆಟಗಾರರಿಗೆ ತಲಾ 5 ನಿಮಿಷ ಹೆಚ್ಚುವರಿ ನೀಡಲಾಗುತ್ತದೆ. ಆಗಲೂ ಡ್ರಾಗೊಂಡರೆ, ಒಂದು ನಿಮಿಷದ ಶೂಟೌಟ್ ಆಟವನ್ನು ಆಡಲಾಗ...