ಭಾರತ, ಮಾರ್ಚ್ 17 -- 2023ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ ಪಂದ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮೈದಾನಕ್ಕೆ ಬಂದು ವೀಕ್ಷಿಸಿದ್ದರು. ಭಾರತ ಸ್ಪರ್ಧಿಸುವ ಪ್ರಮುಖ ಕ್ರೀಡೆಗಳ ಬಗ್ಗೆಯೂ ತಿಳಿದುಕೊಂಡು ಅವರು ಟ್ವೀಟ್‌ ಮಾಡುವುದನ್ನು ನೋಡಿದ್ದೇವೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಕೂಡಾ ಅನುಸರಿಸುವ ಮೋದಿ, ಇದೀಗ ಉಭಯ ರಾಷ್ಟ್ರಗಳ ನಡುವೆ ಯಾವ ದೇಶ ಕ್ರಿಕೆಟ್‌ನಲ್ಲಿ ಬಲಿಷ್ಠ ಎಂಬುದನ್ನು ಹೇಳಿಕೊಂಡಿದ್ದಾರೆ. ಭಾರತ ತಂಡವು ಕಳೆದ ಕೆಲವು ಐಸಿಸಿ ಟೂರ್ನಿಯ ಪಂದ್ಯಗಳಲ್ಲಿ ಪಾಕ್‌ ವಿರುದ್ಧ ಗೆದ್ದು ಮೇಲುಗೈ ಸಾಧಿಸಿದೆ. ಅದಕ್ಕೆ ಇತ್ತೀಚಿನ ಸೇರ್ಪಡೆಯೇ ಚಾಂಪಿಯನ್ಸ್‌ ಟ್ರೋಫಿ. ಈ ಕುರಿತು ಭಾನುವಾರ (ಮಾ.16) ಅಮೆರಿಕದ ಜನಪ್ರಿಯ ಪಾಡ್‌ಕ್ಯಾಸ್ಟರ್ ಲೆಕ್ಸ್ ಫ್ರಿಡ್‌ಮನ್ ಅವರೊಂದಿಗಿನ ಮುಕ್ತ ಸಂಭಾಷಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ತಮ್ಮನ್ನು ತಾವು ಕ್ರಿಕೆಟ್ ತಜ್ಞ ಎಂದು ಹೇಳಿಕೊಳ್ಳುವುದಿಲ್ಲ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಇತ್ತೀಚಿನ ಫಲಿತಾಂಶಗಳ...